ಮುಂಬೈ: ಡಾರ್ಲಿಂಗ್ಸ್ ಚಿತ್ರದ ನಟಿ ದಿವ್ಯಾ ವಿನೇಕರ್ ಅಕಾಲಿಕ ನಿಧನ
ಬಾಲಿವುಡ್ ಚಿತ್ರರಂಗದ ಪೋಷಕ ನಟಿ, ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ದಿವ್ಯಾ ವಿನೇಕರ್ (34) ಅವರು ಅಕ್ಟೋಬರ್ 19ರಂದು ನಿಧನರಾಗಿದ್ದಾರೆ.ಆಲಿಯಾ ಭಟ್ ಹಾಗೂ ಶೆಫಾಲಿ ಶಾ ನಟನೆಯ ‘ಡಾರ್ಲಿಂಗ್ಸ್’ ಸಿನಿಮಾದಲ್ಲಿ ಪ್ರಮುಖ ಪಾತ...

ಬಾಲಿವುಡ್ ನಟಿ ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ದಿವ್ಯಾ ವಿನೇಕರ್ ಅವರು ಅಕ್ಟೋಬರ್ 19ರಂದು ವಿಧಿವಶರಾಗಿದ್ದಾರೆ. ಇವರು ಆಲಿಯಾ ಭಟ್ ನಟನೆಯ ಡಾರ್ಲಿಂಗ್ಸ್ ಸೇರಿದಂತೆ ಜಲ್ಸಾ ಹಾಗೂ ಕುಚ್ ಸಪ್ನೇ ಅಪ್ನೇ ಚಿತ್ರಗಳಲ್ಲಿ ಅಭಿನಯಿಸಿ ಗುರುತಿಸಿಕೊಂಡಿದ್ದರು. ಇವರ ಅಂತ್ಯಕ್ರಿಯೆಯು ಮುಂಬೈನ ಶಿವಾಜಿ ಪಾರ್ಕ್‌ನಲ್ಲಿರುವ ಹಿಂದೂ ಸ್ಮಶಾನದಲ್ಲಿ ನೆರವೇರಿದೆ ಎಂದು ಆಪ್ತರು ತಿಳಿಸಿದ್ದಾರೆ. ದಿವ್ಯಾ ಅವರ ನಿಧನದ ಸುದ್ದಿಯನ್ನು ಆರ್‌ಜೆ ರೋಹಿಣಿ ರಾಮನಾಥನ್ ಇನ್‌ಸ್ಟಾಗ್ರಾಂ ಮೂಲಕ ಖಚಿತಪಡಿಸಿದ್ದು, ಸಾವಿನ ಕಾರಣದ ಬಗ್ಗೆ ಸಾರ್ವಜನಿಕರು ಪ್ರಶ್ನಿಸದಂತೆ ಮನವಿ ಮಾಡಿದ್ದಾರೆ.




