ಕಾರವಾರ | ಕಡಲತೀರಕ್ಕೆ ಅಪ್ಪಳಿಸಿದ ಹೋವರ್‌ಕ್ರಾಫ್ಟ್ ನೌಕೆ
ಕಾರವಾರ: ಕಡಲತೀರಕ್ಕೆ ಬಂದ ಭಾರತೀಯ ಕರಾವಳಿ ಕಾವಲು ಪಡೆಯ ಹೋವರ್‌ಕ್ರಾಫ್ಟ್ (Hovercraft) ನೌಕೆಯು ಆಗಮಿಸಿದ್ದು, ಸ್ಥಳೀಯ ಜನರ ಕುತೂಹಲಕ್ಕೆ ಕಾಣವಾಗಿದೆ. ಕಾರವಾರದ (Karwar) ಟ್ಯಾಗೋರ್ ಬೀಚ್‌ನಲ್ಲಿ ಲಂಗರು ಹಾಕಿದ ಎರಡ...

ಕಾರವಾರ: ಭಾರತೀಯ ಕರಾವಳಿ ಕಾವಲು ಪಡೆಯ ಎರಡು ಹೋವರ್‌ಕ್ರಾಫ್ಟ್ (Hovercraft) ನೌಕೆಗಳು ಕಡಲತೀರಕ್ಕೆ ಆಗಮಿಸಿದ್ದು, ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.
ಕಾರವಾರದ (Karwar) ಟ್ಯಾಗೋರ್ ಬೀಚ್‌ನಲ್ಲಿ ಈ ಎರಡು ಹೋವರ್‌ಕ್ರಾಫ್ಟ್ ನೌಕೆಗಳು ಲಂಗರು ಹಾಕಿದ್ದು, ಇಲ್ಲಿ ವಿಶ್ರಾಂತಿ ಪಡೆಯುತ್ತಿವೆ. ನೀರು, ಮರಳು, ಭೂಮಿ ಹಾಗೂ ಕೆಸರಿನ ಮೇಲೆ ಸುಲಭವಾಗಿ ಸಂಚರಿಸಬಲ್ಲ ಈ ನೌಕೆಗಳು ಅತಿ ವೇಗವಾಗಿ ಚಲಿಸುವ ಶಕ್ತಿಯನ್ನು ಹೊಂದಿವೆ.
ಸಾಮಾನ್ಯ ಹಡಗುಗಳಿಗೆ ಪ್ರವೇಶಿಸಲು ಸಾಧ್ಯವಾಗದಷ್ಟು ಆಳವಿಲ್ಲದ ಜಾಗದಲ್ಲೂ ಹೋಗಬಲ್ಲ ಈ ನೌಕೆಗಳು ಗೋವಾದಿಂದ ಪ್ರಯಾಣ ಆರಂಭಿಸಿ ಕಾರವಾರಕ್ಕೆ ಬಂದಿವೆ. ಈ ನೌಕೆಗಳ ನಿಲುಗಡೆಗೆ ಭಾರತೀಯ ತಡರಕ್ಷಕ ದಳವು ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲ ತೀರದ ಪ್ರದೇಶದಲ್ಲಿ ಜಾಗವನ್ನು ಕೋರಿತ್ತು. ಇದಕ್ಕೆ ಮೀನುಗಾರರು ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆಯನ್ನು ನಡೆಸಿದ್ದರು.
ಇದೀಗ ಎರಡು ಹೋವರ್‌ಕ್ರಾಫ್ಟ್ ನೌಕೆಗಳು ಕಡಲ ತೀರದಲ್ಲಿ ಲಂಗರು ಹಾಕಿದ್ದು, ಇದು ಕುತೂಹಲದ ಜೊತೆಗೆ ಮೀನುಗಾರರಲ್ಲಿ ಆತಂಕಕ್ಕೂ ಕಾರಣವಾಗಿದೆ.




