ಮುಖ್ಯ ವಿಷಯಕ್ಕೆ ಹೋಗಿ
The Karnataka Today
9 Oct
ಸುದ್ದಿ
ಕರ್ನಾಟಕ

ಐಸ್ ಕ್ರೀಂ ಘಟಕಗಳ ಮೇಲೆ ದಾಳಿ: 45 ಕಡೆ ಅವಧಿ ಮೀರಿದ ಆಹಾರ ಪದಾರ್ಥ ಪತ್ತೆ!

ಬೆಂಗಳೂರು: ಐಸ್ ಕ್ರೀಂ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ. ಐಸ್ ಕ್ರೀಂ ತಯಾರಿಕಾ ಘಟಕಗಳ ಮೇಲೆ ಎಫ್‌ಡಿಎ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆಯಾಗಿವೆ. ಆರೋಗ್ಯ ಸಚಿವ ಯು.ಟಿ.ಖಾದರ್ ಸ...

· ರಾಯಚೂರು
ಐಸ್ ಕ್ರೀಂ ಪ್ರಿಯರಿಗೆ ಬಿಗ್ ಶಾಕ್; ರೇಡ್ ವೇಳೆ ಅವಧಿ ಮೀರಿದ ಆಹಾರ ಪದಾರ್ಥ ಪತ್ತೆ
ಹಂಚಿಕೊಳ್ಳಿ:

ಬೆಂಗಳೂರು: ಐಸ್ ಕ್ರೀಂ ಇಷ್ಟಪಡುವವರಿಗೆ ದೊಡ್ಡ ಆಘಾತ ಉಂಟಾಗಿದೆ. ಐಸ್ ಕ್ರೀಂ ಉತ್ಪಾದನಾ ಕೇಂದ್ರಗಳ ಮೇಲೆ ಎಫ್‌ಡಿಎ ಅಧಿಕಾರಿಗಳು ದಾಳಿ ಮಾಡಿದಾಗ ಅವಧಿ ಮುಗಿದಿರುವ ಆಹಾರ ಪದಾರ್ಥಗಳು ಸಿಕ್ಕಿವೆ.

ಆರೋಗ್ಯ ಸಚಿವ ಯು.ಟಿ.ಖಾದರ್ ಅವರ ಆದೇಶದಂತೆ ಸುಮಾರು 45 ಐಸ್ ಕ್ರೀಂ ಉತ್ಪಾದನಾ ಘಟಕಗಳ ಮೇಲೆ ದಾಳಿ ನಡೆಸಲಾಗಿದೆ. ಅವಧಿ ಮೀರಿದ ಆಹಾರ ಪದಾರ್ಥಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಜಯನಗರ 3ನೇ ಬ್ಲಾಕ್‌ನಲ್ಲಿರುವ ಐಸ್ ಕ್ರೀಂ ಘಟಕವೊಂದರ ಮೇಲೆ ದಾಳಿ ಮಾಡಲಾಯಿತು. ಈ ಸಮಯದಲ್ಲಿ ಅವಧಿ ಮೀರಿದ ಬ್ರಿಟಾನಿಯ ಬಿಸ್ಕೆಟ್, ನಂದಿನಿ ಸಮೃದ್ದಿ ಮಿಲ್ಕ್ , ಟೀ ಮತ್ತು ಕಾಫಿ ಮಿಕ್ಸ್ ಕೋಕನೆಟ್ ಪೌಡರ್ ಬಳಸುತ್ತಿರುವುದು ಕಂಡುಬಂದಿದೆ. ಲೇಬಲಿಂಗ್ ದೋಷ, FSSAI ಕಾಯ್ದೆ 2006, 2011 ಉಲ್ಲಂಘನೆಯಾಗಿರುವುದರಿಂದ ಕಾನೂನು ಕ್ರಮ ಜರುಗಿಸಲಾಗಿದೆ.

ಬನ್ನೇರುಘಟ್ಟ ರಸ್ತೆಯ ಬಿಳೇಕಹಳ್ಳಿಯಲ್ಲಿರುವ ಘಟಕವೊಂದರ ಮೇಲೂ ಅಧಿಕಾರಿಗಳು ದಾಳಿ ನಡೆಸಿದರು. ಇಲ್ಲಿಯೂ ಸಹ ಅವಧಿ ಮೀರಿದ Plain Cotic Caramel, Nestle Milk Made, Milky Mist Khoa – ಅವಧಿ ಮೀರಿದ ಅಥವಾ ಲೇಬಲ್ ಇಲ್ಲದ ವಸ್ತುಗಳನ್ನು ಬಳಸುತ್ತಿರುವುದು ಪತ್ತೆಯಾಗಿದೆ.

ರಾಯಚೂರು ಮತ್ತು ಮೈಸೂರಿನಲ್ಲಿಯೂ ಐಸ್ ಕ್ರೀಂ ಘಟಕಗಳ ಮೇಲೆ ದಾಳಿ ನಡೆಸಲಾಗಿದೆ. ರಾಯಚೂರಿನ ಘಟಕವೊಂದರಲ್ಲಿ ಸ್ವಚ್ಛತೆ ಇಲ್ಲದೆ, ಹೈಜೀನ್ ಇಲ್ಲದ ವಾತಾವರಣದಲ್ಲಿ ಐಸ್ ಕ್ರೀಂ ತಯಾರಿಸಲಾಗುತ್ತಿತ್ತು. ಈ ಸಂಬಂಧ ನೋಟಿಸ್ ನೀಡಲಾಗಿದೆ.

ಮೈಸೂರಿನ ಘಟಕದಲ್ಲಿ ಪರವಾನಗಿ ಇಲ್ಲದೆ ಉತ್ಪಾದನೆ ನಡೆಯುತ್ತಿದ್ದು, ಲೇಬಲ್ ಇಲ್ಲದ 20,000 ರೂ. ಮೌಲ್ಯದ ಐಸ್ ಕ್ರೀಂ ಹಾಗೂ ಕಚ್ಚಾ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯದಾದ್ಯಂತ ತಪಾಸಣೆ ಮುಂದುವರಿದಿದೆ. ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

ಹಂಚಿಕೊಳ್ಳಿ: