ಮುಖ್ಯ ವಿಷಯಕ್ಕೆ ಹೋಗಿ
The Karnataka Today
14 Oct
ಸುದ್ದಿ
ಕರ್ನಾಟಕ

ದೇವನಹಳ್ಳಿ: ಗ್ಯಾಸ್ ಲಾರಿಗೆ ರೇಂಜ್ ರೋವರ್ ಡಿಕ್ಕಿ; ಮಾಲೂರು ಬಿಜೆಪಿ ಮುಖಂಡ ಶಿವಕುಮಾರ್ ಸಾವು!

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಾಲೂರು ಬಿಜೆಪಿ ಮುಖಂಡ ಹಾಗೂ ಬಳಕಾಲೂರು ಟಿಕೆಟ್ ಆಕಾಂಕ್ಷಿಯಾಗಿದ್ದ ಶಿವಕುಮಾರ್ (50) ಮೃತಪಟ್ಟಿದ್ದಾರೆ. ಚಿತ್ರದುರ್ಗದಿಂ...

· ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ: ಗ್ಯಾಸ್ ಲಾರಿಗೆ ರೇಂಜ್ ರೋವರ್ ಡಿಕ್ಕಿ; ಮಾಲೂರು ಬಿಜೆಪಿ ಮುಖಂಡ ಶಿವಕುಮಾರ್ ಸಾವು!
ಹಂಚಿಕೊಳ್ಳಿ:

ದೇವನಹಳ್ಳಿ ಬಳಿಯ ಹೊಸಕೋಟೆ-ದಾಬಸ್​ಪೇಟೆ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಾಲೂರು ಬಿಜೆಪಿ ಮುಖಂಡ ಶಿವಕುಮಾರ್ (50) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿತ್ರದುರ್ಗದಿಂದ ಮಾಲೂರಿಗೆ ತೆರಳುತ್ತಿದ್ದಾಗ ಇವರು ಪ್ರಯಾಣಿಸುತ್ತಿದ್ದ ರೇಂಜ್ ರೋವರ್ ಕಾರು ಗ್ಯಾಸ್ ಲಾರಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಕಾರಿನಲ್ಲಿದ್ದ ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ದೇವನಹಳ್ಳಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಹಂಚಿಕೊಳ್ಳಿ: