ಚಿತ್ರದುರ್ಗ ಮದಕರಿನಾಯಕ ಜಯಂತೋತ್ಸವದಲ್ಲಿ ಕಿಚ್ಚ ಸುದೀಪ್ ಹವಾ; ಬರಿಗಾಲಲ್ಲೇ ವೇದಿಕೆಗೆ ಬಂದ ನಟ
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ನಡೆದ ಮದಕರಿನಾಯಕ ಜಯಂತೋತ್ಸವದಲ್ಲಿ ನಟ ಕಿಚ್ಚ ಸುದೀಪ್ ಭಾಗಿಯಾಗಿ ಅಭಿಮಾನಿಗಳ ಗಮನ ಸೆಳೆದರು. ಸುದೀಪ್ ಆಗಮಿಸುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಅವರೊಂ...

ಚಿತ್ರದುರ್ಗದಲ್ಲಿ ನಡೆದ ಮದಕರಿನಾಯಕ ಜಯಂತೋತ್ಸವದಲ್ಲಿ ನಟ ಕಿಚ್ಚ ಸುದೀಪ್ ಪಾಲ್ಗೊಂಡು ಅಭಿಮಾನಿಗಳ ಉತ್ಸಾಹಕ್ಕೆ ಸಾಕ್ಷಿಯಾದರು. ನವರಾತ್ರಿ ಉಪವಾಸದ ಹಿನ್ನೆಲೆಯಲ್ಲಿ ಬರಿಗಾಲಿನಲ್ಲೇ ಕಾರ್ಯಕ್ರಮಕ್ಕೆ ಆಗಮಿಸಿದ ಅವರು, ಮಾದಾರ ಚನ್ನಯ್ಯ ಶ್ರೀಗಳ ಆಶೀರ್ವಾದ ಪಡೆದರು. ವೇದಿಕೆಯ ಮೇಲೆ ಅಭಿಮಾನಿಗಳು ನುಗ್ಗಿದ ಪರಿಣಾಮ ಸಚಿವರಾದ ಸತೀಶ್ ಜಾರಕಿಹೊಳಿ, ರಘುಮೂರ್ತಿ ಮತ್ತು ಮಠಾಧೀಶರು ಗೊಂದಲಕ್ಕೀಡಾದರು. ಸುದೀಪ್ ಭಾಷಣ ಮುಗಿಸಿ ತೆರಳಿದ ಬೆನ್ನಲ್ಲೇ ಅಭಿಮಾನಿಗಳೂ ಮರಳಿದ್ದರಿಂದ ವೇದಿಕೆಯಲ್ಲಿದ್ದ ಗಣ್ಯರು ಅಸಮಾಧಾನ ವ್ಯಕ್ತಪಡಿಸಿದರು.




