ಮುಖ್ಯ ವಿಷಯಕ್ಕೆ ಹೋಗಿ
The Karnataka Today
14 Oct
ಸುದ್ದಿ
ಕರ್ನಾಟಕ

ಬಿಮೋಲ್ ಅಕೋಯಿಜಮ್ ಅಮಾನತಿಗೆ ಆಗ್ರಹ: ರಾಷ್ಟ್ರಪತಿ ಮುರ್ಮು ಭೇಟಿಯಾದ ಬಿಜೆಪಿ ಸಂಸದೆಯರು

ನವದೆಹಲಿ: ದೆಹಲಿಯ ಜವಾಹರ್‌ಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಸದ ಬಿಮೋಲ್‌ ಅಕೋಯಿಜಮ್ ಅವರನ್ನು ಲೋಕಸಭೆಯಿಂದ ಅಮಾನತುಗೊಳಿಸುವಂತೆ...

‘ಕೈ’ ಸಂಸದ ಬಿಮೋಲ್‌ ಅಕೋಯಿಜಮ್ ಅಮಾನತಿಗೆ ಆಗ್ರಹ: ಮುರ್ಮು ಭೇಟಿಯಾದ BJP ಸಂಸದೆಯರು
ಹಂಚಿಕೊಳ್ಳಿ:

ಜೆಎನ್‌ಯುನಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಸಂಸದ ಬಿಮೋಲ್ ಅಕೋಯಿಜಮ್ ಅವರನ್ನು ಲೋಕಸಭೆಯಿಂದ ಅಮಾನತುಗೊಳಿಸಬೇಕೆಂದು ಬಿಜೆಪಿ ಸಂಸದೆಯರ ನಿಯೋಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸಿದೆ. ಡಿ. ಪುರಂದರೇಶ್ವರಿ ನೇತೃತ್ವದ ಈ ತಂಡವು ಸಂತ್ರಸ್ತ ವಿದ್ಯಾರ್ಥಿನಿಯರ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿಗಳಲ್ಲಿ ಕೋರಿದೆ. ಲೈಂಗಿಕ ಕಿರುಕುಳದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೆಎನ್‌ಯು ಈಗಾಗಲೇ ಪ್ರೊಫೆಸರ್ ಬಿಮೋಲ್ ಅಕೋಯಿಜಮ್ ಅವರನ್ನು ಸೇವೆಯಿಂದ ವಜಾಗೊಳಿಸಿದೆ. 2026ರ ಮೇ ತಿಂಗಳಲ್ಲಿ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಈ ಕುರಿತು ದೂರು ನೀಡಿದ್ದರು.

ಹಂಚಿಕೊಳ್ಳಿ: