ಬೆಂಗಳೂರಿನಲ್ಲಿ ರಾಪಿಡೋ ಬೈಕ್ ಸವಾರನ ಮೇಲೆ ಆಟೋ ಚಾಲಕನಿಂದ ಹಲ್ಲೆ ಯತ್ನ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆಟೋ ಚಾಲಕರ ಕಿರಿಕಿರಿ ಪ್ರಯಾಣಿಕರಿಗೆ ದೊಡ್ಡ ಸಮಸ್ಯೆಯಾಗಿದೆ. ಪ್ರಯಾಣಿಕರೊಬ್ಬರು ಆಟೋ-ರಿಕ್ಷಾ ಬದಲಿಗೆ 'ರಾಪಿಡೋ' (Rapido) ಬೈಕ್ ಟ್ಯಾಕ್ಸಿಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ,...

ಬೆಂಗಳೂರಿನಲ್ಲಿ ಅಲ್ಪ ದೂರದ ಪ್ರಯಾಣಕ್ಕೆ 120 ರೂಪಾಯಿ ಕೇಳಿದ ಆಟೋ ಚಾಲಕನ ಬೇಡಿಕೆಯನ್ನು ತಿರಸ್ಕರಿಸಿ ಪ್ರಯಾಣಿಕರೊಬ್ಬರು ರಾಪಿಡೋ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದರು. ಇದರಿಂದ ಕುಪಿತಗೊಂಡ ಆಟೋ ಚಾಲಕ ಬೈಕ್ ಅನ್ನು ಬೆನ್ನಟ್ಟಿ, ಚಲಿಸುತ್ತಿದ್ದ ವಾಹನದ ಮೇಲಿದ್ದ ಪ್ರಯಾಣಿಕನ ಕೈ ಹಿಡಿದು ಕೆಳಗೆ ಎಳೆಯಲು ಪ್ರಯತ್ನಿಸಿದ್ದಾರೆ. ಈ ಭಯಾನಕ ಘಟನೆಯ ಬಗ್ಗೆ ಪ್ರಯಾಣಿಕರು ರೆಡ್ಡಿಟ್ ವೇದಿಕೆಯಲ್ಲಿ ಆತಂಕ ಹಂಚಿಕೊಂಡಿದ್ದಾರೆ. ಚಾಲಕನ ಇಂತಹ ದುರ್ವರ್ತನೆಯಿಂದಾಗಿ ತಾವು ಗಂಭೀರವಾಗಿ ಗಾಯಗೊಳ್ಳುವ ಅಪಾಯವಿತ್ತು ಎಂದು ಅವರು ತಿಳಿಸಿದ್ದು, ಈ ಸಂಬಂಧ ದೂರು ನೀಡುವ ಕುರಿತು ಸಾರ್ವಜನಿಕರ ಸಲಹೆ ಕೋರಿದ್ದಾರೆ.




