ಮಕ್ಕಳಲ್ಲಿ ಬಾಲ್ಯದಿಂದಲೇ ಮನೆಗಳಲ್ಲಿ ನಡೆಯುವ ಭಜನಾ ಅನುಷ್ಠಾನಗಳಿಂದ ಸಂಸ್ಕಾರ ಬೆಳೆಯುತ್ತದೆ::ವಿಜಯ್ ಕೊಡವೂರು
ಮಕ್ಕಳಲ್ಲಿ ಬಾಲ್ಯ ಜೀವನದಲ್ಲಿ ಭಜನೆ ಪೂಜೆ ಪುರಸ್ಕಾರ ಮುಂತಾದ ಅನುಷ್ಠಾನಗಳನ್ನು ಕಲಿಸುವುದರಿಂದ ಸಂಸ್ಕಾರ ಬೆಳೆಯುತ್ತದೆ

ಮಲ್ಪೆ: ಮಲ್ಪೆ ಮತ್ಸ್ಯರಾಜ್ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಕ್ಲಬ್ ಹಾಗೂ ಕಲ್ಮಾಡಿ ಮಾರಿಗುಡಿ ಟೀಮ್ ಭಗವತಿಯ ಸಹಯೋಗದಲ್ಲಿ ನವರಾತ್ರಿಯ ಪ್ರಯುಕ್ತ ಆಯೋಜಿಸಲಾದ *‘ಬಾಲ ಭಜನಾ ವೈಭವ’* ಭಜನಾ ಸ್ಪರ್ಧೆಯು ಶುಕ್ರವಾರ ಕಲ್ಮಡಿ ಕಟ್ಟುದಬುದ ಭಗವತೀ ಮಾರಿಕಾಂಬಾ ದೇವಿಯ ಸನ್ನಿಧಿಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಸಭೆಯ ನಿಕಟ ಪೂರ್ವ ಸದಸ್ಯ ವಿಜಯ್ ಕೊಡವೂರು, ಮಕ್ಕಳಿಗೆ ಬಾಲ್ಯದಿಂದಲೇ ನಿತ್ಯ ಭಜನೆ ಮಾಡುವ ಸಂಸ್ಕಾರ ನೀಡುವುದರಿಂದ ಅವರು ಧರ್ಮದ ಹಾದಿಯಲ್ಲಿ ಮುನ್ನಡೆಯಲು ಪ್ರೇರಣೆ ದೊರೆಯುತ್ತದೆ. ಈ ನಿಟ್ಟಿನಲ್ಲಿ ಮತ್ಸ್ಯರಾಜ್ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಕ್ಲಬ್ ಕಳೆದ ಹಲವು ವರ್ಷಗಳಿಂದ ಭಜನೆಯ ಮೂಲಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಸ್ಕಾರವನ್ನು ಬೆಳೆಸುವ ಮಹತ್ವದ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ಕಲ್ಮಾಡಿ ಮಾರಿಗುಡಿ ಟೀಮ್ ಭಗವತಿಯ ಅಧ್ಯಕ್ಷ ಸದಾನಂದ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಮಲ್ಪೆ ಪರ್ಸಿಯನ್ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ ಸುವರ್ಣ, ಕಾರ್ತಿಕ್ ಗ್ರೂಪ್ನ ಮುಖ್ಯಸ್ಥ ಹರಿಯಪ್ಪ ಕೋಟ್ಯಾನ್, ಕೊಡವೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಕಲ್ಮಾಡಿ ಶ್ರೀ ಭಗವತೀ ಮಾರಿಕಾಂಬಾ ಸನ್ನಿಧಿಯ ಅಧ್ಯಕ್ಷ ಟಿ. ಚಂದ್ರಶೇಖರ್, ಮಲ್ಪೆ ಮತ್ಸ್ಯರಾಜ್ ಗ್ರೂಪ್ನ ಕೇಶವ ಎಂ. ಕೋಟ್ಯಾನ್ ಹಾಗೂ ತೀರ್ಪುಗಾರರಾದ ಉಷಾ ಹೆಬ್ಬಾರ್ ಮತ್ತು ಸುರೇಖಾ ಭಟ್ ಉಪಸ್ಥಿತರಿದ್ದರು.
ಶ್ವೇತ ಕುಂದರ್ ಕಿದಿಯೂರು ಅವರು ಮಾರಿಕಾಂಬಾ ದೇವಿಯ ಗ್ಲಿಟರ್ ಆರ್ಟ್ ರಚಿಸಿದರು. ಕಲ್ಮಾಡಿ ಮಾರಿಗುಡಿ ಟೀಮ್ ಭಗವತಿಯ ಶಶಾಂಕ್ ಸ್ವಾಗತಿಸಿದರು. ಲಿಖಿತ್ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು. ವಿನಯ್ ಕುಮಾರ್ ವಂದಿಸಿದರು.




