ಮೈಸೂರು: ದಸರಾ ಕಂಬಳಕ್ಕೆ ಅಶೋಕ್ ರೈ ಚಾಲನೆ, ಎರಡು ದಿನಗಳ ಕಾಲ ಕರಾವಳಿ ಸಂಸ್ಕೃತಿ ಪ್ರದರ್ಶನ
– ಮೈಸೂರು ದಸರಾ ಸಂಭ್ರಮಕ್ಕೆ ಕರಾವಳಿಯ ಕ್ರೀಡಾ ಪರಂಪರೆಯ ಮೆರುಗು ಮೈಸೂರು: ವಿಶ್ವವಿಖ್ಯಾತ ದಸರಾ ಕಂಬಳಕ್ಕೆ (Kambala) ಇಂದು ವಿದ್ಯುಕ್ತ ಚಾಲನೆ ದೊರೆತಿದ್ದು, ದಸರಾ ಮಹೋತ್ಸವದಲ್ಲಿ ಕರಾವಳಿಯ ಸಾಂಪ್ರದಾಯಿಕ ಕಂಬಳದ ಸಂಭ...

ಮೈಸೂರಿನ ಸಾತಗಳ್ಳಿಯ ವಿ.ಟಿ.ಯು ಕಾಲೇಜು ಬಳಿ ದಸರಾ ಕಂಬಳದ ಕ್ರೀಡಾಕೂಟಕ್ಕೆ ಪುತ್ತೂರು ಶಾಸಕ ಅಶೋಕ್ ರೈ ಅವರು ಇಂದು ವಿಧ್ಯುಕ್ತವಾಗಿ ಚಾಲನೆ ನೀಡಿದ್ದಾರೆ. ಸುಮಾರು 20 ಎಕರೆ ಜಾಗದಲ್ಲಿ ಸಿದ್ಧಪಡಿಸಲಾದ 147 ಮೀಟರ್ ಉದ್ದದ ಎರಡು ಟ್ರ್ಯಾಕ್ ಗಳಲ್ಲಿ ಕೋಣಗಳ ಓಟ ನಡೆಯಲಿದೆ. ಎರಡು ದಿನಗಳ ಕಾಲ ನಡೆಯುವ ಈ ಕ್ರೀಡಾ ಸಂಭ್ರಮದಲ್ಲಿ ಜಾಕಿಗಳ ಕೌಶಲ್ಯ ಪ್ರದರ್ಶನವೂ ಇರಲಿದೆ. ನಾಳೆ ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭಾಗವಹಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಿದ್ದಾರೆ.




