ಉಪ್ಪಿನಂಗಡಿ: ಬಾರ್ ಬಳಿ ಮಾರಕಾಸ್ತ್ರ ಪ್ರದರ್ಶಿಸಿ ಸಾರ್ವಜನಿಕರಿಗೆ ಜೀವ ಬೆದರಿಕೆ
ಉಪ್ಪಿನಂಗಡಿಯ ಶೆಣೈ ರಸ್ತೆಯಲ್ಲಿರುವ ಕಾರ್ತಿಕ್ ಬಾರ್‌ನಲ್ಲಿ ಮೆನೇಜರ್ ಆಗಿ ಕೆಲಸ ಮಾಡುತ್ತಿರುವ ಲೋಕೇಶ್ ಎಂಬುವವರು ನೀಡಿದ ದೂರಿನ ಮೇರೆಗೆ, ಬಾರ್ ಬಳಿ ನಡೆದ ಗಲಾಟೆ ಹಾಗೂ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ...

ಉಪ್ಪಿನಂಗಡಿಯ ಶೆಣೈ ರಸ್ತೆಯಲ್ಲಿರುವ ಕಾರ್ತಿಕ್ ಬಾರ್‌ನಲ್ಲಿ ಮೆನೇಜರ್ ಆಗಿ ಕೆಲಸ ಮಾಡುತ್ತಿರುವ ಲೋಕೇಶ್ ಎಂಬುವವರು ನೀಡಿದ ದೂರಿನ ಮೇರೆಗೆ, ಬಾರ್ ಬಳಿ ನಡೆದ ಗಲಾಟೆ ಹಾಗೂ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ.
ದೂರಿನ ಪ್ರಕಾರ, ದಿನಾಂಕ 18-10-2026 ರಂದು ರಾತ್ರಿ ಸುಮಾರು 8.30 ಗಂಟೆಗೆ ಬಾರ್ ಬಳಿ ಮಂಜುನಾಥ್, ವಿಶ್ವನಾಥ ಮತ್ತು ಮುನ್ನ ಅಲಿಯಾಸ್ ಗೋಪಾಲ ಶೆಟ್ಟಿ ಎಂಬುವವರ ನಡುವೆ ಮಾತಿನ ಚಕಮಕಿ ನಡೆದು ಘರ್ಷಣೆ ಉಂಟಾಗಿದೆ.
ಈ ವೇಳೆ ಮುನ್ನ ಅಲಿಯಾಸ್ ಗೋಪಾಲ ಶೆಟ್ಟಿ ಎಂಬಾತ ಮಂಜುನಾಥನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ನಿನ್ನನ್ನು ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದಕ್ಕೆ ಪ್ರತಿಯಾಗಿ ಮಂಜುನಾಥ ಎಂಬಾತ ತನ್ನ ಬಳಿ ಇದ್ದ ತಲವಾರನ್ನು ಹೊರತೆಗೆದು ಹಲ್ಲೆಗೆ ಮುಂದಾಗಿದ್ದಾನೆ ಹಾಗೂ ವಿಶ್ವನಾಥ ಎಂಬಾತ ತನ್ನ ಕೈಯಲ್ಲಿದ್ದ ಹೆಲ್ಮೆಟ್‌ನಿಂದ ಮುನ್ನ ಎಂಬಾತನಿಗೆ ಹೊಡೆಯಲು ಪ್ರಯತ್ನಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಕೃತ್ಯದಿಂದಾಗಿ ಆ ಸಮಯದಲ್ಲಿ ರಸ್ತೆಯಲ್ಲಿ ಓಡಾಡುತ್ತಿದ್ದ ಸಾರ್ವಜನಿಕರಲ್ಲಿ ತೀವ್ರ ಆತಂಕ ಹಾಗೂ ಭಯದ ವಾತಾವರಣ ಸೃಷ್ಟಿಯಾಗಿತ್ತು ಎಂದು ದೂರುದಾರರು ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 135/2026, ಕಲಂ: 194, 296, 351(3) BNS-2023 ಹಾಗೂ ಕಲಂ: 25(1 B), (b) Arms Act 1959 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತನಿಖೆಯ ನಂತರವಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.



