ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಭಾರತ

ಸಿಯಾಟಲ್‌ನಲ್ಲಿ ದೀಪಾವಳಿ ಆಚರಣೆ ವೇಳೆ ಹಿಂದೂಗಳ ವಿರುದ್ಧ ಜನಾಂಗೀಯ ನಿಂದನೆ

ಅಮೆರಿಕದ ಸಿಯಾಟಲ್ ನಗರದಲ್ಲಿ ದೀಪಾವಳಿ ಆಚರಿಸುತ್ತಿದ್ದ ಹಿಂದೂಗಳ ಮೇಲೆ ಸ್ಥಳೀಯ ಬಲಪಂಥೀಯ ಕಾರ್ಯಕರ್ತರು ಜನಾಂಗೀಯ ನಿಂದನೆ ಮಾಡಿರುವ ಘಟನೆ ನಡೆದಿದೆ. ಹಿಂದೂಗಳನ್ನು ಡಾಟ್ ಹೆಡ್​ಗಳೆಂದು ಬಣ್ಣಿಸಿ, ಅವರನ್ನು ಅಮೆರಿಕ ಬಿಟ...

‘ಎಲ್ಲಾ ಡಾಟ್ ಹೆಡ್​ಗಳನ್ನು ದೇಶಬಿಟ್ಟು ಕಳುಹಿಸಿ’: ಅಮೆರಿಕದಲ್ಲಿ ದೀಪಾವಳಿ ಆಚರಿಸುತ್ತಿದ್ದ ಹಿಂದೂಗಳ ವಿರುದ್ಧ ಘೋಷಣೆ
ಹಂಚಿಕೊಳ್ಳಿ:

ಅಮೆರಿಕದ ಸಿಯಾಟಲ್ ನಗರದಲ್ಲಿ ಶಾಂತಿಯುತವಾಗಿ ದೀಪಾವಳಿ ಆಚರಿಸುತ್ತಿದ್ದ ಹಿಂದೂಗಳ ಮೇಲೆ ಬಲಪಂಥೀಯ ಕಾರ್ಯಕರ್ತರು ಜನಾಂಗೀಯ ನಿಂದನೆ ನಡೆಸಿದ್ದಾರೆ. ಜೇಕ್ ಲಾಂಗ್ ಮತ್ತು ಥಾಮಸ್ ಅಲನ್ ನೇತೃತ್ವದ ಗುಂಪು ಹಿಂದೂಗಳನ್ನು ದೇಶದಿಂದ ಹೊರಹಾಕುವಂತೆ ಘೋಷಣೆಗಳಿರುವ ಫಲಕಗಳನ್ನು ಪ್ರದರ್ಶಿಸಿತು. ಕ್ರೈಸ್ತರ ಸ್ಥಾನವನ್ನು ಹಿಂದೂಗಳು ಆಕ್ರಮಿಸಿಕೊಳ್ಳುತ್ತಿದ್ದಾರೆ ಎಂಬ ಪಿತೂರಿ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಈ ಕೃತ್ಯ ಎಸಗಲಾಗಿದೆ. ಘಟನೆಯ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಹಂಚಿಕೊಳ್ಳಿ: