ರಾಷ್ಟ್ರೀಯ ಶಿಕ್ಷಣ ನೀತಿ 2020: ಶಾಲೆಗಳ ನಾಮಫಲಕ ಬದಲಾದರೂ ತರಗತಿಯಲ್ಲಿ ಬದಲಾವಣೆ ಮರೀಚಿಕೆ
Santosh Nair's article in 'Your India' series: ರಾಷ್ಟ್ರೀಯ ಶಿಕ್ಷಣ ನೀತಿ 2020 (NEP 2020) ಕಾಗದದ ಮೇಲೆ 5+3+3+4 ಮಾದರಿ, ನಿಪುಣ್ ಭಾರತ್ನಂತಹ ಮಹತ್ತರ ಬದಲಾವಣೆಗಳನ್ನು ತಂದಿದೆ. ಆದರೆ, ವಾಸ್ತವದಲ್ಲಿ, ಶಾಲ...

ರಾಷ್ಟ್ರೀಯ ಶಿಕ್ಷಣ ನೀತಿ 2020 ಜಾರಿಯಾಗಿ ಐದು ವರ್ಷ ಕಳೆದರೂ, ಶಾಲೆಯ ಹೊರಗಿನ ಬಣ್ಣ ಮತ್ತು ನಾಮಫಲಕ ಬದಲಾದಷ್ಟೇ ಸುಲಭವಾಗಿ ತರಗತಿಯ ಒಳಗಿನ ಕಲಿಕಾ ವಾತಾವರಣ ಬದಲಾಗಿಲ್ಲ. 10+2 ಮಾದರಿಯ ಬದಲು 5+3+3+4 ರಚನೆ, ನಿಪುಣ್ ಭಾರತ್ ಮಿಷನ್ ಮತ್ತು ಸಿ.ಯು.ಇ.ಟಿ ಪರೀಕ್ಷೆಗಳಂತಹ ಸುಧಾರಣೆಗಳನ್ನು ಕಾಗದದ ಮೇಲೆ ತರಲಾಗಿದೆ. ಆದರೆ, ಶಿಕ್ಷಕರಿಗೆ ಸೂಕ್ತ ತರಬೇತಿ ಮತ್ತು ಮೂಲಸೌಕರ್ಯಗಳ ಕೊರತೆಯಿಂದಾಗಿ ಬೋಧನಾ ಗುಣಮಟ್ಟದಲ್ಲಿ ನಿರೀಕ್ಷಿತ ಸುಧಾರಣೆ ಕಂಡಿಲ್ಲ. ಭಾಷಾ ನೀತಿಯ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಘರ್ಷಗಳು ಕೂಡ ಶಿಕ್ಷಣ ಸುಧಾರಣೆಯ ದಾರಿಯಲ್ಲಿ ಸವಾಲಾಗಿ ಪರಿಣಮಿಸಿವೆ.




