ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಭಾರತ

ಪ್ರಯಾಗ್‌ರಾಜ್‌ನಲ್ಲಿ ಅಕ್ರಮವಾಗಿ ಹೂತಿಟ್ಟಿದ್ದ 5 ಕೋಟಿ ರೂಪಾಯಿ ನಗದು ಪತ್ತೆ

ಪ್ರಯಾಗ್‌ರಾಜ್‌ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಭಾರಿ ಪೊಲೀಸ್ ಕಾರ್ಯಾಚರಣೆಯಲ್ಲಿ ನೆಲದಡಿಯಲ್ಲಿ ಬಚ್ಚಿಟ್ಟಿದ್ದ 3 ನೀಲಿ ಬಣ್ಣದ ಪ್ಲಾಸ್ಟಿಕ್ ಡ್ರಮ್‌ಗಳಿಂದ ಸುಮಾರು 5 ಕೋಟಿ ರೂಪಾಯಿಗೂ...

· ರಾಮನಗರ
ಥಾರ್ ಕಾರಿನ ಜಗಳದಿಂದ ಬಯಲಾಯ್ತು ಭೂಗತ ರಹಸ್ಯ! ಪ್ರಯಾಗ್‌ರಾಜ್‌ನಲ್ಲಿ 3 ಡ್ರಮ್ ತುಂಬ ನಗದು ಪತ್ತೆ: ಬರೋಬ್ಬರಿ 5 ಕೋಟಿ ಕಪ್ಪುಹಣ ಜಪ್ತಿ!
ಹಂಚಿಕೊಳ್ಳಿ:

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಬರೈಪುರ್ ರಾಮನಗರ ಗ್ರಾಮದಲ್ಲಿ ಪೊಲೀಸರು ಮತ್ತು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದಾರೆ. ಈ ವೇಳೆ ರಾಕೇಶ್ ಯಾದವ್ ಅಲಿಯಾಸ್ ಮಹಾಕಾಲ್ ಮತ್ತು ರಾಜೇಶ್ ಯಾದವ್ ಎಂಬ ಸಹೋದರರ ಮನೆಯ ನೆಲದಡಿಯಲ್ಲಿ ಹೂತಿಟ್ಟಿದ್ದ ಮೂರು ನೀಲಿ ಡ್ರಮ್‌ಗಳಲ್ಲಿ ಸುಮಾರು 5 ಕೋಟಿ ರೂಪಾಯಿಗೂ ಅಧಿಕ ನಗದು ಪತ್ತೆಯಾಗಿದೆ. ನೋಟುಗಳು ಹಾಳಾಗದಂತೆ ಪ್ಲಾಸ್ಟಿಕ್ ಕವರ್‌ಗಳಲ್ಲಿ ಸುತ್ತಿಡಲಾಗಿತ್ತು. ಮಹೀಂದ್ರಾ ಥಾರ್ ಕಾರು ಖರೀದಿ ಸೇರಿದಂತೆ ಸ್ಥಳೀಯರೊಂದಿಗೆ ನಡೆದ ಜಗಳದ ಬೆನ್ನಲ್ಲೇ ಈ ಕಪ್ಪುಹಣದ ಮಾಹಿತಿ ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಹಂಚಿಕೊಳ್ಳಿ: