ಮುಖ್ಯ ವಿಷಯಕ್ಕೆ ಹೋಗಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಭಾರತ

ನವದೆಹಲಿ: ವಿದೇಶಿ ನ್ಯಾಯಾಲಯದ ವಿಚ್ಛೇದನ ಭಾರತದಲ್ಲಿ ಮಾನ್ಯವಲ್ಲ ಎಂದ ಸುಪ್ರೀಂ ಕೋರ್ಟ್

ಭಾರತದಲ್ಲಿ ಮದುವೆಯಾದ ದಂಪತಿಗಳು ವಿದೇಶಿ ಕಾನೂನುಗಳು ಮತ್ತು ಕೋರ್ಟ್‌ಗಳ ಮೂಲಕ ವಿಚ್ಛೇದನ ಪಡೆದರೂ, ಅದು ಭಾರತೀಯ ಕಾನೂನಿನಡಿ ಮಾನ್ಯವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಬ್ರಿಟಿಷ್ ಪ್ರಜೆಯೊಬ್ಬರ ವಿರ...

ಭಾರತದಲ್ಲಿ ಮದುವೆಯಾಗಿ ವಿದೇಶದಲ್ಲಿ ಡಿವೋರ್ಸ್ ಪಡೆದರೆ ಅದು ಮಾನ್ಯವಲ್ಲ: ಸುಪ್ರೀಂಕೋರ್ಟ್ ತೀರ್ಪು
ಹಂಚಿಕೊಳ್ಳಿ:

ಭಾರತದಲ್ಲಿ ನಡೆದ ವಿವಾಹಗಳನ್ನು ವಿದೇಶಿ ನ್ಯಾಯಾಲಯಗಳ ಮೂಲಕ ವಿಚ್ಛೇದನ ಪಡೆದರೆ ಅದು ಕಾನೂನುಬದ್ಧವಾಗಿ ಅಂಗೀಕೃತವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಅವರ ಪೀಠವು ಸಿಪಿಸಿ ಸೆಕ್ಷನ್ 13 ಅನ್ನು ಉಲ್ಲೇಖಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಇಂತಹ ವಿಚ್ಛೇದನ ಆದೇಶಗಳನ್ನು ಆಧರಿಸಿ ಎರಡನೇ ಮದುವೆಯಾದಲ್ಲಿ, ಅಂತಹ ವ್ಯಕ್ತಿಗಳು ಐಪಿಸಿ ಸೆಕ್ಷನ್ 494 ರ ಅಡಿಯಲ್ಲಿ ದ್ವಿವಿವಾಹ ಅಪರಾಧದ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ. ವಿದೇಶಿ ಪ್ರಜೆಗಳಾದವರಿಗೂ ಈ ನಿಯಮ ಅನ್ವಯವಾಗಲಿದ್ದು, ಭಾರತೀಯ ಕಾನೂನಿನ ಚೌಕಟ್ಟಿಗೆ ವಿರುದ್ಧವಾದ ವಿದೇಶಿ ತೀರ್ಪುಗಳು ಮಾನ್ಯತೆ ಪಡೆಯುವುದಿಲ್ಲ.

ಹಂಚಿಕೊಳ್ಳಿ: