ನವದೆಹಲಿ: E100 ಮತ್ತು E85 ಎಥೆನಾಲ್ ಇಂಧನ ಚಾಲಿತ ಫ್ಲೆಕ್ಸ್-ಫ್ಯೂಯಲ್ ಕಾರುಗಳಿಗೆ ಅನುಮತಿ
ನವದೆಹಲಿ: ಕೇಂದ್ರ ಮೋಟಾರು ವಾಹನ ನಿಯಮಗಳಲ್ಲಿ ಮಹತ್ವ ಬದಲಾವಣೆಗಳನ್ನು ಮಾಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. 100 ಪ್ರತಿಶತ ಎಥೆನಾಲ್ (E100) ಮತ್ತು E85 ಇಂಧನದಲ್ಲಿ ಚಲಿಸುವ ಫ್ಲೆಕ್ಸ್–ಫ್ಯುಯೆಲ್ ಕಾರುಗಳಿಗ...

ಕೇಂದ್ರ ಸರ್ಕಾರವು ಮೋಟಾರು ವಾಹನ ನಿಯಮಗಳಲ್ಲಿ ತಿದ್ದುಪಡಿ ತರುವ ಮೂಲಕ ದೇಶದಲ್ಲಿ ಶೇ 100 ರಷ್ಟು ಎಥೆನಾಲ್ ಅಥವಾ E100 ಮತ್ತು E85 ಇಂಧನದಲ್ಲಿ ಕಾರ್ಯನಿರ್ವಹಿಸುವ ವಾಹನಗಳಿಗೆ ಅಧಿಕೃತ ಮನ್ನಣೆ ನೀಡಿದೆ. ಈ ವಿಶೇಷ ತಂತ್ರಜ್ಞಾನದ ಕಾರುಗಳನ್ನು ಹೊರತುಪಡಿಸಿ, ಸಾಮಾನ್ಯ ಪೆಟ್ರೋಲ್ ಅಥವಾ E20 ಇಂಧನಕ್ಕೆ ವಿನ್ಯಾಸಗೊಳಿಸಿದ ವಾಹನಗಳಲ್ಲಿ ಈ ಇಂಧನಗಳನ್ನು ಬಳಸುವಂತಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಬಳಕೆಯಲ್ಲಿರುವ ವಾಹನಗಳ ಮಾಲೀಕರು ಯಾವುದೇ ಮಾರ್ಪಾಡುಗಳನ್ನು ಮಾಡಬೇಕಿಲ್ಲ. ಎಥೆನಾಲ್ ಬಳಕೆಯಿಂದ ಇಂಗಾಲದ ಹೊರಸೂಸುವಿಕೆ ಕಡಿಮೆಯಾಗಲಿದ್ದು, ಕಚ್ಚಾ ತೈಲ ಆಮದಿನ ಮೇಲಿನ ಅವಲಂಬನೆಯನ್ನು ತಗ್ಗಿಸಲು ಈ ನಿರ್ಧಾರ ಸಹಕಾರಿಯಾಗಲಿದೆ.




