ಮುಂಬೈ: ದಿಯಾ ಮಿರ್ಜಾ ಅವರ ವಿಡಿಯೋ ಮರು ಅಪ್‌ಲೋಡ್ ಮಾಡಲು ಬಿಎಂಸಿಗೆ ಹೈಕೋರ್ಟ್ ಆದೇಶ
ಮುಂಬೈ (ಮಹಾರಾಷ್ಟ್ರ): ಭಾರತವು ಒಂದು ಜಾತ್ಯತೀತ ರಾಷ್ಟ್ರ ದೇಶವಲ್ಲವಾ? ಪರಿಸರ ಕಾಳಜಿಯ ವಿಷಯದಲ್ಲಿ ಯಾವುದೇ ಧಾರ್ಮಿಕ ಕೋನ ಅಥವಾ ಬಣ ರಾಜಕಾರಣಕ್ಕೆ ಆಸ್ಪದವಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಈ ಮೂಲಕ...

ಮುಂಬೈನಲ್ಲಿ ಪರಿಸರ ಸ್ನೇಹಿ ದೀಪಾವಳಿ ಆಚರಣೆ ಕುರಿತು ನಟಿ ದಿಯಾ ಮಿರ್ಜಾ ನೀಡಿದ್ದ ವಿಡಿಯೋ ಸಂದೇಶವನ್ನು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಡಿಲೀಟ್ ಮಾಡಿತ್ತು. ಈ ಕ್ರಮವನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಭಾರತವು ಜಾತ್ಯತೀತ ದೇಶವಾಗಿದ್ದು, ಪರಿಸರ ಮತ್ತು ಆರೋಗ್ಯದ ವಿಷಯದಲ್ಲಿ ಧರ್ಮದ ಲೇಪ ಹಚ್ಚುವುದು ಸರಿಯಲ್ಲ ಎಂದು ನ್ಯಾಯಮೂರ್ತಿಗಳಾದ ಗಿರೀಶ್ ಕುಲಕರ್ಣಿ ಮತ್ತು ಡಾ. ನೀಲಾ ಗೋಖಲೆ ಅವರ ಪೀಠ ಅಭಿಪ್ರಾಯಪಟ್ಟಿದೆ. ರಾಜಕೀಯ ಒತ್ತಡಕ್ಕೆ ಮಣಿಯದೆ ವಿಡಿಯೋವನ್ನು ತಕ್ಷಣವೇ ಮರು ಅಪ್‌ಲೋಡ್ ಮಾಡುವಂತೆ ಬಿಎಂಸಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.




