ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಭಾರತ

ಮಧುರೈ: ಆಗಮ ದೇವಾಲಯ ಪ್ರವೇಶಕ್ಕೆ ಅನ್ಯಧರ್ಮೀಯರಿಗೆ ಹೊಸ ನಿಯಮ ಜಾರಿ

ಮದ್ರಾಸ್ ಹೈಕೋರ್ಟ್ ಆಗಮಿಕ ದೇವಾಲಯಗಳ ಪ್ರವೇಶಕ್ಕೆ ಹೊಸ ನಿಯಮ ಹೊರಡಿಸಿದೆ. ಹಿಂದೂಯೇತರರು ದೇವಾಲಯದ ದೇವತೆ ಮತ್ತು ಸಂಪ್ರದಾಯಗಳ ಮೇಲೆ ಭಕ್ತಿ ಹಾಗೂ ಗೌರವವನ್ನು ಘೋಷಣೆಯ ಮೂಲಕ ದೃಢಪಡಿಸಬೇಕು. ಈ ನಿಯಮ ಇಡೀ ದೇವಾಲಯದ ಆವರಣ...

ಆಗಮ ದೇವಾಲಯಗಳಿಗೆ ಅನ್ಯಧರ್ಮೀಯರ ಪ್ರವೇಶಕ್ಕೆ ಕಠಿಣ ನಿಯಮ
ಹಂಚಿಕೊಳ್ಳಿ:

ತಮಿಳುನಾಡಿನ ಆಗಮ ಶಾಸ್ತ್ರದ ಆಧಾರದಲ್ಲಿ ಪೂಜೆ ನಡೆಯುವ ದೇವಾಲಯಗಳಿಗೆ ಪ್ರವೇಶ ಪಡೆಯುವ ಅನ್ಯಧರ್ಮೀಯರಿಗೆ ಮದ್ರಾಸ್ ಹೈಕೋರ್ಟ್ ಕಠಿಣ ನಿಬಂಧನೆ ವಿಧಿಸಿದೆ. ಇನ್ನು ಮುಂದೆ ಹಿಂದೂಯೇತರರು ದೇವತೆಯ ಮೇಲಿನ ಭಕ್ತಿ ಹಾಗೂ ದೇವಾಲಯದ ಸಂಪ್ರದಾಯಗಳನ್ನು ಗೌರವಿಸುವುದಾಗಿ ಘೋಷಣಾಪತ್ರಕ್ಕೆ ಸಹಿ ಹಾಕುವುದು ಕಡ್ಡಾಯವಾಗಿದೆ. ಈ ನಿಯಮವು ಕೇವಲ ಧ್ವಜಸ್ತಂಭದ ಒಳಭಾಗಕ್ಕೆ ಮಾತ್ರವಲ್ಲದೆ ಇಡೀ ದೇವಾಲಯದ ಆವರಣಕ್ಕೆ ಅನ್ವಯಿಸಲಿದೆ ಎಂದು ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಮತ್ತು ಪಿ. ಮುರುಗನ್ ಅವರ ಪೀಠ ತಿಳಿಸಿದೆ. ಈ ಆದೇಶವು ಶಬರಿಮಲೆ ಮತ್ತು ಶಿರಡಿ ಸಾಯಿಬಾಬಾ ದೇವಸ್ಥಾನದಂತಹ ಸಾರ್ವತ್ರಿಕ ದೇವಾಲಯಗಳಿಗೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಹಂಚಿಕೊಳ್ಳಿ: