ಮುಖ್ಯ ವಿಷಯಕ್ಕೆ ಹೋಗಿ
The Karnataka Today
8 Oct
ಸುದ್ದಿ
ಭಾರತ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

ನವದೆಹಲಿ: ರಷ್ಯಾ ಸಶಸ್ತ್ರ ಪಡೆಗಳಲ್ಲಿ ಇನ್ನೂ ಉಳಿದಿರುವ 69 ಭಾರತೀಯರನ್ನು ಬಿಡುಗಡೆಗೊಳಿಸಲು ಭಾರತ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಬುಧವಾರ ತಿಳಿಸಿದ್ದಾ...

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!
ಹಂಚಿಕೊಳ್ಳಿ:

ನವದೆಹಲಿ: ರಷ್ಯಾ ಸಶಸ್ತ್ರ ಪಡೆಗಳಲ್ಲಿ ಇನ್ನುಳಿದಿರುವ 69 ಭಾರತೀಯರನ್ನು ಬಿಡುಗಡೆ ಮಾಡಿಸಲು ಭಾರತ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಬುಧವಾರ ಹೇಳಿದ್ದಾರೆ. ಇದೇ ಹೊತ್ತಿನಲ್ಲಿ, ರಷ್ಯಾ ಸೇನೆಗೆ ಸೇರಲು ಬರುವ ಆಮಿಷಗಳಿಗೆ ಒಳಗಾಗದಂತೆ ಭಾರತೀಯರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.

ರಷ್ಯಾ ಅಧಿಕಾರಿಗಳ ಜೊತೆ ಭಾರತ ಸರ್ಕಾರ ನಿರಂತರವಾಗಿ ಮಾತುಕತೆ ನಡೆಸುತ್ತಿದ್ದು, ಈಗಾಗಲೇ 139 ಭಾರತೀಯರನ್ನು ಸೇನೆಯಿಂದ ಬೇಗ ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದೆ. ರಷ್ಯಾ ಸೇನೆಯಲ್ಲಿರುವ ಉಳಿದ ಭಾರತೀಯರನ್ನು ಬಿಡುಗಡೆ ಮಾಡಿಸಲು ರಷ್ಯಾ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

ಸರ್ಕಾರದ ಬಳಿ ಇರುವ ಮಾಹಿತಿಯ ಪ್ರಕಾರ, ಒಟ್ಟು 259 ಭಾರತೀಯರನ್ನು ರಷ್ಯಾ ಸಶಸ್ತ್ರ ಪಡೆಗಳಿಗೆ ನೇಮಕ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ಇವರ ಪೈಕಿ ಭಾರತದ ಪ್ರಯತ್ನದಿಂದ 139 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. ಇನ್ನು 69 ಭಾರತೀಯರು ಎಲ್ಲಿದ್ದಾರೆ ಮತ್ತು ಅವರ ಸ್ಥಿತಿಗತಿ ಏನು ಎಂಬ ಬಗ್ಗೆ ರಷ್ಯಾ ಅಧಿಕಾರಿಗಳಿಂದ ಮಾಹಿತಿ ಪಡೆಯಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ ರಷ್ಯಾದಲ್ಲಿ ಸೇನಾ ಸೇವೆಗೆ ನೇಮಕ ಮಾಡಿಕೊಳ್ಳುವ ಆಫರ್‌ಗಳ ವಿರುದ್ಧ ಭಾರತ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಇಂತಹ ನೇಮಕಾತಿಯಿಂದ ಪ್ರಾಣಕ್ಕೆ ಗಂಭೀರ ಅಪಾಯ ಎದುರಾಗಬಹುದು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ರಷ್ಯಾ ಸೇನೆಗೆ ಸೇರುವಂತೆ ಭಾರತೀಯರಿಗೆ ನೀಡಲಾಗುತ್ತಿರುವ ಆಫರ್‌ಗಳಿಂದ ದೂರ ಉಳಿಯುವಂತೆ ಮತ್ತೊಮ್ಮೆ ಮನವಿ ಮಾಡುತ್ತೇವೆ. ಇದರಿಂದ ಜೀವಕ್ಕೆ ಗಂಭೀರ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಸರ್ಕಾರ ಪದೇಪದೇ ಎಚ್ಚರಿಕೆ ನೀಡುತ್ತಿದ್ದರೂ, ಭಾರತೀಯರು ರಷ್ಯಾ ಸಶಸ್ತ್ರ ಪಡೆಗಳಿಗೆ ಸೇರುತ್ತಿರುವ ವರದಿಗಳು ಬರುತ್ತಿರುವುದು ಆಳವಾದ ಕಳವಳಕ್ಕೆ ಕಾರಣವಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಸೆಪ್ಟೆಂಬರ್ 30ರಂದು ಕೂಡ ಈ ಕುರಿತು ಇತ್ತೀಚಿನ ಸಲಹೆಯನ್ನು ನೀಡಲಾಗಿತ್ತು. ಆದರೂ ಹೊಸದಾಗಿ ಭಾರತೀಯರು ರಷ್ಯಾ ಸೇನೆಗೆ ಸೇರುತ್ತಿರುವ ವರದಿಗಳು ಬರುತ್ತಿವೆ.

ಕಳೆದ ಎರಡು ವರ್ಷಗಳಲ್ಲಿ ಹಲವು ಬಾರಿ ಸಲಹೆ ಹಾಗೂ ಎಚ್ಚರಿಕೆಗಳನ್ನು ನೀಡಿದ್ದರೂ, ಸೆಪ್ಟೆಂಬರ್ 30ರಂದು ಹೊರಡಿಸಿದ ಇತ್ತೀಚಿನ ಸಲಹೆಯ ನಂತರವೂ ಭಾರತೀಯರು ರಷ್ಯಾ ಸಶಸ್ತ್ರ ಪಡೆಗಳಿಗೆ ಸೇರುತ್ತಿರುವ ವರದಿಗಳು ಬರುತ್ತಿವೆ. ಇದು ಆಳವಾದ ಕಳವಳದ ವಿಷಯವಾಗಿದೆ ಎಂದು ಹೇಳಿದ್ದಾರೆ.

ಹಂಚಿಕೊಳ್ಳಿ: