ಮುಖ್ಯ ವಿಷಯಕ್ಕೆ ಹೋಗಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಭಾರತ

ಗುಜರಾತ್‌ನ ಮೆಟ್ಪುರ್ ಗ್ರಾಮದಲ್ಲಿ ಅನ್ಯಜಾತಿ ಯುವಕನ ಪ್ರೀತಿಯಿಂದ 21 ವರ್ಷದ ಮಗಳನ್ನು ಕೊಂದ ತಂದೆ

ಮರ್ಯಾದೆಗೆ ಅಂಜಿ ತನ್ನ 21 ವರ್ಷದ ಮಗಳನ್ನು ತಂದೆಯೇ ಕೊಂದಿರುವ ದಾರುಣ ಘಟನೆ ನಡೆದಿದೆ. ಗುಜರಾತ್‌ನ ಆನಂದ್ ಜಿಲ್ಲೆಯ ಖಂಭತ್ ತಾಲ್ಲೂಕಿನ ಮೆಟ್ಪುರ್ ಗ್ರಾಮದಲ್ಲಿ ಘಟನೆ ನಡೆದಿದೆ. ಮಾಹಿತಿಯ ಪ್ರಕಾರ, ಆರೋಪಿ ತಂದೆ ಕೌಶಲ್‌...

ಅನ್ಯಜಾತಿ ಯುವಕನ ಜೊತೆ ಪ್ರೀತಿ: ಮರ್ಯಾದೆಗೆ ಅಂಜಿ 21 ವರ್ಷದ ಮಗಳನ್ನು ಕತ್ತುಹಿಸುಕಿ ಕೊಂದ ತಂದೆ
ಹಂಚಿಕೊಳ್ಳಿ:

ಗುಜರಾತ್‌ನ ಆನಂದ್ ಜಿಲ್ಲೆಯ ಮೆಟ್ಪುರ್ ಗ್ರಾಮದಲ್ಲಿ ಕೌಶಲ್‌ಕುಮಾರ್ ಪಟೇಲ್ ಎಂಬಾತ ತನ್ನ 21 ವರ್ಷದ ಮಗಳು ಸನಿಯಾ ಪಟೇಲ್ ಅವರನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಬಿ.ಕಾಂ ಪದವೀಧರೆಯಾಗಿದ್ದ ಸನಿಯಾ ಬೇರೆ ಜಾತಿಯ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು, ಇದು ತಂದೆಗೆ ಇಷ್ಟವಿರಲಿಲ್ಲ. ದೀಪಾವಳಿ ರಾತ್ರಿ ಈ ವಿಷಯವಾಗಿ ತಂದೆ ಮಗಳ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಸಂಬಂಧವನ್ನು ಮುರಿಯಲು ನಿರಾಕರಿಸಿದ ಮಗಳನ್ನು ಕೌಶಲ್‌ಕುಮಾರ್ ಕೊಲೆ ಮಾಡಿದ್ದಾನೆ. ಮೃತಳ ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಲಾಗಿತ್ತು, ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಕೊಲೆಯಾಗಿರುವುದು ಖಚಿತವಾಯಿತು. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹಂಚಿಕೊಳ್ಳಿ: