ಅಂಬಾಲಾದಲ್ಲಿ ಶಹೀದ್ ಸ್ಮಾರಕ ಉದ್ಘಾಟಿಸಿದ ಕೇಂದ್ರ ಸಚಿವ ಅಮಿತ್ ಶಾ
ಚಂಡೀಗಢ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಬಾಲಾ ಕಂಟೋನ್ಮೆಂಟ್‌ನಲ್ಲಿ 1857ರಲ್ಲಿ ಬ್ರಿಟಿಷರ ಆಡಳಿತದ ವಿರುದ್ಧ ಹೋರಾಡಿದ ಸೈನಿಕರ ಸ್ಮರಣಾರ್ಥ ನಿರ್ಮಿಸಲಾಗಿರುವ ‘ಶಹೀದ್ ಸ್ಮಾರಕ’ವನ್ನು ಉದ್ಘಾಟಿಸಿದರು. 1857ರ ಘಟನೆಗಳನ್...

ಅಂಬಾಲಾ ಕಂಟೋನ್ಮೆಂಟ್‌ನಲ್ಲಿ 1857ರ ಸ್ವಾತಂತ್ರ್ಯ ಸಂಗ್ರಾಮದ ವೀರರ ಸ್ಮರಣಾರ್ಥ ನಿರ್ಮಿಸಲಾದ ಶಹೀದ್ ಸ್ಮಾರಕವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಾರ್ಪಣೆ ಮಾಡಿದರು. 1857ರ ಹೋರಾಟವನ್ನು ದಂಗೆ ಎಂದು ಕರೆಯುವ ವಸಾಹತುಶಾಹಿ ಧೋರಣೆಯನ್ನು ಅವರು ಕಟುವಾಗಿ ಟೀಕಿಸಿದರು. ಈ ಹೋರಾಟ ಬ್ರಿಟಿಷ್ ಸಾಮ್ರಾಜ್ಯದ ಅಡಿಪಾಯವನ್ನು ಅಲುಗಾಡಿಸಿತ್ತು ಎಂದು ಸ್ಮರಿಸಿದ ಅವರು, ಹುತಾತ್ಮರ ತ್ಯಾಗದ ಫಲವಾಗಿ ಇಂದು ಭಾರತ ಪ್ರಗತಿಯತ್ತ ಸಾಗುತ್ತಿದೆ ಎಂದರು. ಇದೇ ವೇಳೆ 1,260 ಕೋಟಿ ರೂ. ವೆಚ್ಚದ ರಾಷ್ಟ್ರೀಯ ಹೆದ್ದಾರಿ ಯೋಜನೆಯನ್ನು ಸಹ ಅವರು ಉದ್ಘಾಟಿಸಿದರು.




