ಅಹಮದಾಬಾದ್: ಮಗನನ್ನು ಬಲಿ ಕೊಟ್ಟ ತಂದೆ, ಮೃತದೇಹದ ಪಕ್ಕವೇ ಮಲಗಿದ್ದ ಆರೋಪಿ
ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ 10 ವರ್ಷದ ಮಗನ ತಲೆಯನ್ನು ಮನೆಯಲ್ಲಿದ್ದ ದೇವತೆಯ ಪೀಠಕ್ಕೆ ಪದೇ ಪದೇ ಜಜ್ಜಿ ಕೊಲೆ ಮಾಡಿದ್ದಾನೆ. ಬಳಿಕ ಮಗುವಿನ ಮೃತದೇಹದ ಪಕ್ಕದಲ್ಲೇ ಮಲಗಿದ್ದಾನ...

ಅಹಮದಾಬಾದ್ ಜಿಲ್ಲೆಯ ಸಾನಂದ್ ತಾಲೂಕಿನ ವಿಂಛಿಯಾ ಗ್ರಾಮದಲ್ಲಿ ನರೇಶ್ ಪಟೇಲ್ ಎಂಬಾತ ತನ್ನ 10 ವರ್ಷದ ಮಗ ಕರಣ್‌ನನ್ನು ದೇವತೆಯ ಪೀಠದ ಬಳಿ ತಲೆ ಜಜ್ಜಿ ಕೊಲೆ ಮಾಡಿದ್ದಾನೆ. ಘಟನೆಯ ಬಳಿಕ ಆರೋಪಿ ಮೃತದೇಹದ ಪಕ್ಕದಲ್ಲೇ ಮಲಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಕುಟುಂಬದಲ್ಲಿ ಮುಂದೆ ಯಾರೂ ಭುವಾ ಆಗಬಾರದು ಎಂಬ ವಿಚಿತ್ರ ಕಾರಣಕ್ಕೆ ಆತ ಈ ಕೃತ್ಯ ಎಸಗಿದ್ದಾನೆ. ಪತ್ನಿ ಭಾರ್ತಿಬೆನ್ ನೀಡಿದ ದೂರಿನ ಮೇರೆಗೆ ಸಾನಂದ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.




