ಶಿವರಾಜ್ ಕುಮಾರ್ ಅವರನ್ನು ಭೇಟಿಯಾದ ಪ್ರೇಮದ ಊರಲಿ ಚಿತ್ರತಂಡ
ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಸೃಷ್ಟಿಸಿರುವ 'ಪ್ರೇಮದ ಊರಲಿ' ಸಿನಿಮಾ ನಾಡಿನಾದ್ಯಂತ ಭರ್ಜರಿ 25 ನೇ ದಿನವನ್ನು ಪೂರ್ಣಗೊಳಿಸಿದ್ದು, 100 ಕೋಟಿ ರೂ ಕಲೆಕ್ಷನ್ ನತ್ತ ದಾಪುಗಾಲು ಹಾಕಿದೆ. ಹಳ್ಳಿ ಸೊಗಡು, ಕೌಟುಂಬಿಕ ಕ...

ರಾಜ್ಯಾದ್ಯಂತ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿರುವ ಪ್ರೇಮದ ಊರಲಿ ಚಿತ್ರತಂಡವು ನಟ ಶಿವರಾಜ್ ಕುಮಾರ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದೆ. ಈ ಭೇಟಿಯ ಸಂದರ್ಭದಲ್ಲಿ ನಿರ್ದೇಶಕ ಮನೋಜ್ ಕುಮಾರ್, ನಟಿಯರಾದ ತಪಸ್ವಿನಿ ಪೂಣಚ್ಚ ಹಾಗೂ ರಮಿಕಾ ಶಿವು ಉಪಸ್ಥಿತರಿದ್ದರು. ಈ ಚಿತ್ರವು ಈಗಾಗಲೇ 100 ಕೋಟಿ ರೂಪಾಯಿ ಗಳಿಕೆಯತ್ತ ದಾಪುಗಾಲು ಹಾಕುತ್ತಿದ್ದು, ಹಲವು ಸ್ಟಾರ್ ನಟರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಭೇಟಿಯ ದೃಶ್ಯಗಳನ್ನು ನಟ ಶ್ರೀರಾಮ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಶಿವಣ್ಣನ ಬೆಂಬಲಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.




