ಕೇರಳದ ಗುರುವಾಯೂರು ದೇವಸ್ಥಾನಕ್ಕೆ ನಟಿ ವನಿತಾ ವಾಸು ಭೇಟಿ
‘ಅಮೃತಧಾರೆ’ ಧಾರಾವಾಹಿಯಲ್ಲಿ ಶಕುಂತಲಾ ಪಾತ್ರದ ಮೂಲಕ ಗಮನ ಸೆಳೆಯುತ್ತಿರುವ ನಟಿ ವನಿತಾ ವಾಸು, ಶಾಲಾ ಗೆಳತಿಯರ ಜೊತೆ ಕೇರಳದ ಪ್ರಸಿದ್ಧ ಗುರುವಾಯೂರು ದೇವಸ್ಥಾನಕ್ಕೆ ಭೇಟಿ ನೀಡಿ ಗುರುವಾಯೂರಪ್ಪನ ದರ್ಶನ ಪಡೆದಿದ್ದಾರೆ.

ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾ ಪಾತ್ರದಲ್ಲಿ ನಟಿಸುತ್ತಿರುವ ವನಿತಾ ವಾಸು, ಶೂಟಿಂಗ್‌ನಿಂದ ಬಿಡುವು ಪಡೆದು ಕೇರಳದ ಪ್ರಸಿದ್ಧ ಗುರುವಾಯೂರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ತಮ್ಮ ಶಾಲಾ ದಿನಗಳ ಗೆಳತಿಯರೊಂದಿಗೆ ಈ ಧಾರ್ಮಿಕ ಪ್ರವಾಸ ಕೈಗೊಂಡಿರುವ ಅವರು, ಬೆಳಗ್ಗೆ ಮತ್ತು ಸಂಜೆ ದೇವರ ದರ್ಶನ ಪಡೆದು ಭಕ್ತಿಭಾವ ಮೆರೆದಿದ್ದಾರೆ. ವೃತ್ತಿಜೀವನದ ಒತ್ತಡದ ನಡುವೆ ಹಳೆಯ ಸ್ನೇಹಿತರೊಂದಿಗೆ ಸಮಯ ಕಳೆಯುವ ಮೂಲಕ ಅವರು ಮನಸ್ಸಿಗೆ ನೆಮ್ಮದಿ ಕಂಡುಕೊಂಡಿದ್ದಾರೆ. ಗುರುವಾಯೂರಪ್ಪನ ಸನ್ನಿಧಿಯಲ್ಲಿ ಸ್ನೇಹಿತರೊಂದಿಗೆ ಕಳೆದ ಈ ಕ್ಷಣಗಳು ನಟಿಗೆ ವಿಶೇಷ ಅನುಭವ ನೀಡಿದೆ.




