ಮುಂಬೈನಲ್ಲಿ ನಿದ್ರೆಯಲ್ಲಿದ್ದಾಗ ಫಿಟ್ಸ್ ಬಂದು 33 ವರ್ಷದ ನಟ ಅನುಜ್ ಠಾಕೂರ್ ನಿಧನ
ಮುಂಬೈ: ನಿದ್ರೆಯಲ್ಲಿದ್ದಾಗ ಸಂಭವಿಸಿದ ಫಿಟ್ಸ್ (Seizure) ಕಾರಣದಿಂದ ಹಿಂದಿ ಕಿರುತೆರೆಯ ಜನಪ್ರಿಯ ನಟ ಅನುಜ್ ಠಾಕೂರ್ (33) ಅವರು ಭಾನುವಾರ ನಿಧನರಾಗಿದ್ದಾರೆ. ಸದಾ ಫಿಟ್‌ನೆಸ್‌ಗೆ ಆದ್ಯತೆ ನೀಡುತ್ತಿದ್ದ ಯುವ ನಟನ ಹಠಾ...

ಹಿಂದಿ ಕಿರುತೆರೆಯ ನಟ ಅನುಜ್ ಠಾಕೂರ್ ಭಾನುವಾರ ಮುಂಬೈನಲ್ಲಿ ತಮ್ಮ 33ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ನಿದ್ರೆಯಲ್ಲಿದ್ದಾಗ ಸಂಭವಿಸಿದ ಫಿಟ್ಸ್ ಸಮಸ್ಯೆಯೇ ಅವರ ಅಕಾಲಿಕ ಮರಣಕ್ಕೆ ಕಾರಣ ಎಂದು ಕುಟುಂಬದವರು ತಿಳಿಸಿದ್ದಾರೆ. ಧೂಮ್ ಮಚಾವೋ ಧೂಮ್ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದ ಇವರ ಸಾವಿನ ವಿಷಯವನ್ನು ಆಪ್ತ ಸ್ನೇಹಿತ ರೂಪೇಶ್ ಸೋನಾರ್ ಸಾಮಾಜಿಕ ಜಾಲತಾಣದ ಮೂಲಕ ಖಚಿತಪಡಿಸಿದ್ದಾರೆ. ಪ್ರತಿದಿನ ಮುಂಜಾನೆ ವ್ಯಾಯಾಮಕ್ಕಾಗಿ ಎದ್ದೇಳುತ್ತಿದ್ದ ಅನುಜ್ ಅಂದು ಬೆಳಿಗ್ಗೆ ಎದ್ದೇಳದಿದ್ದಾಗ ತಾಯಿ ಕೊಠಡಿಗೆ ತೆರಳಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.




