ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಸಿನಿಮಾ

ಮುಂಬೈನ ಜುಹುದಲ್ಲಿ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಒಂದು ವಾರ ಮೊದಲೇ ಸಂಚು

ಅಕ್ಟೋಬರ್ 11ರ ಭೇಟಿ ಕೂಡ ನಟನ ಮೇಲೆ ದಾಳಿ ನಡೆಸುವ ಹಿಂದಿನ ಪ್ರಯತ್ನದ ಭಾಗವಾಗಿತ್ತೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಟೈಗರ್ ಮೈದಾನಕ್ಕೆ ಬಂದಿರುವ ಮಾಹಿತಿಯನ್ನು ಬೇರೆ ಯಾರಾದರೂ ಆರೋಪಿಗಳಿಗೆ ನೀಡಿದ್ದಾರೆ...

TIGER: ಒಂದು ವಾರದ ಮೊದಲೇ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿಗೆ ಪ್ಲಾನ್ ಆಗಿತ್ತಾ? ಆದ್ರೆ ಆ ಮುಹೂರ್ತ ತಪ್ಪಿದ್ದು ಹೇಗೆ?
ಹಂಚಿಕೊಳ್ಳಿ:

ಮುಂಬೈನ ಜುಹು ಪ್ರದೇಶದ ಪುಷ್ಪ ನರ್ಸೀ ಪಾರ್ಕ್‌ನಲ್ಲಿ ನಟ ಟೈಗರ್ ಶ್ರಾಫ್ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಅಕ್ಟೋಬರ್ 18ರಂದು ಸಂಜೆ ನಟ ತಮ್ಮ ಬಿಎಂಡಬ್ಲ್ಯು ಕಾರಿನಲ್ಲಿ ತೆರಳುತ್ತಿದ್ದಾಗ ರೆಹಾನ್, ಫೂಲ್ ಸಿಂಗ್ ಮತ್ತು ಹೃತಿಕ್ ಕುಮಾರ್ ಎಂಬುವರು ದಾಳಿ ನಡೆಸಿದ್ದಾರೆ. ಅಕ್ಟೋಬರ್ 11ರಂದೇ ಆರೋಪಿಗಳು ದಾಳಿಗೆ ಸಿದ್ಧತೆ ನಡೆಸಿದ್ದರು ಎನ್ನಲಾಗಿದ್ದು, ಅಂದು ನಟ ಮೈದಾನಕ್ಕೆ ಬಾರದಿದ್ದರಿಂದ ಯೋಜನೆ ವಿಫಲವಾಗಿತ್ತು. ಘಟನೆಯಲ್ಲಿ ಚಾಲಕ ಫಿರ್ದೌಸ್ ಇಬ್ರಾಹಿಂ ಬಲೋಚ್ ಮತ್ತು ಟೈಗರ್ ಶ್ರಾಫ್ ಗಾಯಗೊಂಡಿದ್ದು, ಅವರನ್ನು ಸಾಂತಾಕ್ರೂಜ್ ಪಶ್ಚಿಮದ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ನಡೆಸುತ್ತಿದ್ದಾರೆ.

ಹಂಚಿಕೊಳ್ಳಿ: