ಚೆನ್ನೈ: ಐಶ್ವರ್ಯಾ ಅರ್ಜುನ್ ಮತ್ತು ಉಮಾಪತಿ ರಾಮಯ್ಯ ವಿಚ್ಛೇದನ ವದಂತಿಗೆ ತಂಬಿ ರಾಮಯ್ಯ ಸ್ಪಷ್ಟನೆ
ಚೆನ್ನೈ (ತಮಿಳುನಾಡು): ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಹಿರಿಯ ಪುತ್ರಿ ಐಶ್ವರ್ಯ ಅರ್ಜುನ್ ಹಾಗೂ ನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಅವರ ವೈವಾಹಿಕ ಜೀವನದ ಕುರಿತು ಹಬ್ಬಿದ್ದ ವಿಚ್ಛೇದನದ ವದಂತಿಗಳಿಗೆ...

ನಟಿ ಐಶ್ವರ್ಯಾ ಅರ್ಜುನ್ ಮತ್ತು ಉಮಾಪತಿ ರಾಮಯ್ಯ ದಂಪತಿ ದೂರವಾಗುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇಟಲಿಯ ಟುಸ್ಕಾನಿ ನಗರದಲ್ಲಿ ನಡೆದ ಅಂಜನಾ ಅರ್ಜುನ್ ಅವರ ಮದುವೆಯಲ್ಲಿ ಉಮಾಪತಿ ಕಾಣಿಸಿಕೊಳ್ಳದ ಕಾರಣ ಈ ವದಂತಿ ಹುಟ್ಟಿಕೊಂಡಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ನಟ ತಂಬಿ ರಾಮಯ್ಯ, ಸಮಯ ಮತ್ತು ಹಣದ ಉಳಿತಾಯಕ್ಕಾಗಿ ತಾವು ಮದುವೆಗೆ ಹೋಗಿರಲಿಲ್ಲ ಎಂದು ತಿಳಿಸಿದ್ದಾರೆ. ದಂಪತಿಗಳ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಶೀಘ್ರದಲ್ಲೇ ಚೆನ್ನೈನಲ್ಲಿ ನಡೆಯುವ ರಿಸೆಪ್ಷನ್ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ. ಸುಳ್ಳು ಸುದ್ದಿಗಳನ್ನು ಹಬ್ಬಿಸದಂತೆ ಅವರು ಮನವಿ ಮಾಡಿದ್ದಾರೆ.




