ಬೆಂಗಳೂರು: ನಿರ್ದೇಶಕ ಪುರುಷೋತ್ತಮ ಸಿ. ವಿರುದ್ಧ ಫಿಲಂ ಚೇಂಬರ್‌ಗೆ ಪ್ರಿಯಾಂಕಾ ಉಪೇಂದ್ರ ದೂರು
ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಪತ್ನಿ ಪ್ರಿಯಾಂಕಾ ಅವರು ತಮ್ಮ ಮಗ ಆಯುಷ್ ನಟನೆಯ ಮೊಟ್ಟಮೊದಲ ಸಿನಿಮಾದ ನಿರ್ದೇಶಕ ಪುರುಷೋತ್ತಮ್ ವಿರುದ್ಧ ಫಿಲಂ ಚೇಂಬರ್‌ಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಅವರು ನಿರ್ದೇಶಕರು, ಅವ...

ಶ್ರೀ ಕಲ್ಪವೃಕ್ಷ ಮೂವಿ ಮೇಕರ್ಸ್ ಸಂಸ್ಥೆಯ ನಿರ್ಮಾಪಕಿಯಾಗಿರುವ ಪ್ರಿಯಾಂಕಾ ಉಪೇಂದ್ರ ಅವರು, ನಿರ್ದೇಶಕ ಪುರುಷೋತ್ತಮ ಸಿ. ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅಧಿಕೃತ ದೂರು ನೀಡಿದ್ದಾರೆ. ಚಿತ್ರೀಕರಣದಲ್ಲಿ ವಿಳಂಬ, ಆರ್ಥಿಕ ನಷ್ಟ ಹಾಗೂ ವೃತ್ತಿಪರತೆಯ ಕೊರತೆಯಂತಹ ಗಂಭೀರ ಆರೋಪಗಳನ್ನು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕಥಾ ಅಭಿವೃದ್ಧಿಯಲ್ಲಿ ನಿರ್ಮಾಪಕರ ತಂಡದ ಶ್ರಮವನ್ನು ನಿರ್ದೇಶಕರು ಕಡೆಗಣಿಸಿರುವುದಲ್ಲದೆ, ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ. ಈ ವಿವಾದವು ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.




