IDBI Bank: ₹52,877 ಕೋಟಿಗೆ ಕೆನಡಾ ಕಂಪನಿಗೆ ಶೇ. 60.72 ಪಾಲು ಮಾರಾಟ
ಕೇಂದ್ರ ಸರ್ಕಾರ ಮತ್ತು ಎಲ್ಐಸಿ ಜಂಟಿಯಾಗಿ ಐಡಿಬಿಐ ಬ್ಯಾಂಕ್ನಲ್ಲಿರುವ ತಮ್ಮ ಶೇ. 60.72ರಷ್ಟು ಪಾಲನ್ನು ಕೆನಡಾದ ಫೇರ್ಫ್ಯಾಕ್ಸ್ ಸಂಸ್ಥೆಗೆ ಮಾರಾಟ ಮಾಡಲು ಒಪ್ಪಿಗೆ ನೀಡಿವೆ. ಇದರಿಂದ ಸರ್ಕಾರಕ್ಕೆ ₹52,877 ಕೋಟಿ ಆದ...

ಐಡಿಬಿಐ ಬ್ಯಾಂಕ್ನಲ್ಲಿರುವ ಸರ್ಕಾರ ಮತ್ತು ಎಲ್ಐಸಿ ಒಡೆತನದ ಒಟ್ಟು 60.72% ಪಾಲನ್ನು ಮಾರಾಟ ಮಾಡಲು ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ (CCEA) ಅಧಿಕೃತ ಅನುಮೋದನೆ ನೀಡಿದೆ. ಈ ಷೇರುಗಳನ್ನು ಕೆನಡಾ ಮೂಲದ ಫೇರ್ಫ್ಯಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ಸ್ ಸಂಸ್ಥೆಯು ಖರೀದಿಸಿದ್ದು, ಇದರಿಂದ ಸರ್ಕಾರಕ್ಕೆ ₹52,877 ಕೋಟಿ ರೂಪಾಯಿ ಆದಾಯ ಲಭಿಸಲಿದೆ. ಈ ಪ್ರಕ್ರಿಯೆಯಿಂದ ಬ್ಯಾಂಕಿನ ಹೆಸರಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಮತ್ತು ಗ್ರಾಹಕರ ಠೇವಣಿಗಳು ಸುರಕ್ಷಿತವಾಗಿರಲಿವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಹೂಡಿಕೆದಾರ ಸಂಸ್ಥೆಗೆ ಮೂರು ವರ್ಷಗಳ ಲಾಕ್-ಇನ್ ಪೀರಿಯಡ್ ವಿಧಿಸಲಾಗಿದ್ದು, ಇದು ಭಾರತದ ಬ್ಯಾಂಕಿಂಗ್ ಇತಿಹಾಸದ ಅತಿದೊಡ್ಡ ವಿದೇಶಿ ನೇರ ಹೂಡಿಕೆ ವಹಿವಾಟಾಗಿದೆ.




