ಎಸ್ ಡಿ ಪಿ ಐ ಪಕ್ಷದ ಮುಖಂಡರ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
10/12/2024 ರಂದು ಮದ್ಯಾಹ್ನ 2:30 ಗಂಟೆಗೆ ಠಾಣಾ ವ್ಯಾಪ್ತಿಯ ಹೆಜಮಾಡಿ ಟೋಲ್‌ಗೇಟ್ ಬಳಿ ಪಡುಬಿದ್ರಿ ಪೊಲೀಸ್ ಠಾಣೆ ಪಿಎಸ್ಐ ಪ್ರಸನ್ನ ಎಮ್ ಎಸ್ ಕರ್ತವ್ಯದಲ್ಲಿ ಇರುವ ಸಮಯ ಸೋಶಿಯೆಲ್ ಡೆಮೋಕ್ರೋಟಿಕ್ ಪಾರ್ಟಿ ಆಪ್ ಇಂಡಿಯಾ ಕರ್ನಾಟಕ ವತಿಯಿಂದ ಯು ಟರ್ನ್ ರಾಜ್ಯ ಸರಕಾರದ ವಿರುದ್ದ ಸಾಮಾಜಿಕ ನ್ಯಾಯಕ್ಕಾಗಿ ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ-2 ವನ್ನು ಉಡುಪಿಯಿಂದ ಹಮ್ಮಿಕೊಂಡಿದ್ದು
ಟೋಲ್ ಬಳಿ ಬಂದ ಪಕ್ಷದ ನಾಯಕರಾದ ರಿಯಾಜ್ ಕಡಂಬು, ಕಾಪುವಿನ ಹನೀಫ್ ಮೂಳೂರು, ನೂರುದ್ದೀನ್ ಮಲ್ಲಾರು, ಫಿರೋಜ್ ಕಂಚಿನಡ್ಕ, ತೌಪೀಕ್ ಉಚ್ಚಿಲ, ಮಜೀದ್ ಉಚ್ಚಿಲ, ಇಬ್ರಾಹಿಂ ಕಂಚಿನಡ್ಕ ರವರಿಗೆ ಜಾಥಾಗೆ ಅನುಮತಿ ಇದೆಯೇ ಎಂದು ಕೇಳಿದಾಗ ಅವರೆಲ್ಲರೂ ಅನುಮತಿ ಇಲ್ಲ ಎಂದು ತಿಳಿಸಿದ್ದು ಅಲ್ಲದೆ ಯಾವುದೇ ಅನುಮತಿ ಪತ್ರವನ್ನು ಹಾಜರುಪಡಿಸಿರುವುದಿಲ್ಲ
. ನೀವು ಅನುಮತಿ ಇಲ್ಲದೆ ಮೆರವಣಿಗೆ ನಡೆಸಿದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಮತ್ತು ಸಾರ್ವಜನಿಕರಿಗೆ ಅಡಚಣೆ ಉಂಟಾಗುತ್ತದೆ ಎಂದು ತಿಳಿಸಿದರೂ ಕೂಡಾ ಸುಮಾರು 75 ರಿಂದ 100 ಜನರನ್ನು ಸೇರಿಸಿ ಅವರವರೊಳಗೆ ಮಾತಾಡುತ್ತಾ ನಾವಿಲ್ಲಿಂದಲೇ ಮೆರವಣಿಗೆ ಹೊರಡುವ ಎಂದು ಹೇಳುತ್ತಾ ಗುಂಪಿನಲ್ಲಿ ಸೇರಿದ ಇತರರಿಗೆ ಪ್ರಚೋದನೆ ನೀಡುತ್ತಾ ಮಾತನಾಡಿಕೊಂಡು ಮೆರವಣಿಗೆ ಹೊರಟಾಗ ಪಿ.ಎಸ್.ಐ ರವರು ಅನುಮತಿ ಇಲ್ಲದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆ ಹೊರಟರೆ ವಾಹನಗಳಿಗೆ ಮತ್ತು ಸಾರ್ವಜನಿಕರಿಗೆ ಅಡಚಣೆ ಉಂಟಾಗುತ್ತದೆ
ಈ ಬಗ್ಗೆ ನಿಮ್ಮ ವಿರುದ್ಧ ಪ್ರಕರಣ ದಾಖಲು ಮಾಡಬೇಕಾಗುತ್ತದೆ ಎಂದು ತಿಳಿಸಿದರೂ ಲೆಕ್ಕಿಸದೇ ಘೋಷಣೆಯನ್ನು ಕೂಗುತ್ತಾ ಅವರುಗಳು ತಂದಿದ್ದ ಕಾರು ಮತ್ತು ಬೈಕುಗಳಲ್ಲಿ ಹೆಜಮಾಡಿ ರಾಷ್ಟ್ರೀಯ ಹೆದ್ದಾರಿಯ ಟೋಲ್‌ನಿಂದ ರಸ್ತೆಯನ್ನು ಆಕ್ರಮಿಸಿಕೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನಗಳಿಗೆ ತಡೆಮಾಡಿಕೊಂಡು ಅಡ್ಡಾದಿಡ್ಡಿ ಚಲಾಯಿಸುತ್ತಾ ಹೆಜಮಾಡಿ ರಾಷ್ಟ್ರೀಯ ಹೆದ್ದಾರಿ ಮೂಲಕ ಮೂಲ್ಕಿ ಕಡೆ ಹೋಗಿದ್ದು,
ಆದುದರಿಂದ ಸೋಶಿಯೆಲ್ ಡೆಮೋಕ್ರೋಟಿಕ್ ಪಾರ್ಟಿ ಆಪ್ ಇಂಡಿಯಾ ಕರ್ನಾಟಕ ಇದರ ಪದಾಧಿಕಾರಿಗಳು ಜಾಥಾಕ್ಕೆ ಸಕ್ಷಮ ಪ್ರಾಧಿಕಾರದಿಂದ ಯಾವುದೇ ಅನುಮತಿಯನ್ನು ಪಡೆಯದೇ ದಿನಾಂಕ 10/12/2024 ರಂದು ಮದ್ಯಾಹ್ನ 2:30 ಗಂಟೆಯಿಂದ 3:30 ಗಂಟೆಯ ವರೆಗೂ ಕಾಪು ತಾಲೂಕು
ಹೆಜಮಾಡಿ ಗ್ರಾಮದ ಹೆಜಮಾಡಿ ರಾಷ್ಟ್ರೀಯ ಹೆದ್ದಾರಿ ಟೋಲ್ ಗೇಟ್ ಬಳಿ ಅಕ್ರಮ ಗುಂಪುಗೂಡಿ, ಅಲ್ಲಿಂದ ತೆರಳುವಂತೆ ಪಿ.ಎಸ್.ಐ ರವರು ಸೂಚನೆ ನೀಡಿದರೂ ತೆರಳದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ತೊಂದರೆ ಮಾಡಿಕೊಂಡು ಕಾನೂನು ಉಲ್ಲಂಘನೆ ಮಾಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ 159/2024 ಕಲಂ:57,189(2),189(3), 281,285 ಜೊತೆಗೆ 190 ಬಿ,ಎನ್,ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.”