ಇಸ್ರೇಲ್-ಇರಾನ್ ಯುದ್ಧಕ್ಕೆ ಅಮೆರಿಕ ಎಂಟ್ರಿ: ಜಿ7 ಶೃಂಗಸಭೆಯನ್ನು ಮಧ್ಯದಲ್ಲಿ ಬಿಟ್ಟು ವಾಷಿಂಗ್ಟನ್‌ಗೆ ಮರಳಿದ ಟ್ರಂಪ್

4
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆನಡಾದಲ್ಲಿ ನಡೆದ ಜಿ7 ಶೃಂಗಸಭೆಯನ್ನು ಮಧ್ಯದಲ್ಲಿ ಬಿಟ್ಟು ವಾಷಿಂಗ್ಟನ್‌ಗೆ ಮರಳಿದ್ದಾರೆ. ತಮ್ಮ ದೇಶಕ್ಕೆ ಮರಳುವ ಮೊದಲು, ಟ್ರಂಪ್ ಏನೋ ದೊಡ್ಡ ಘಟನೆ ಸಂಭವಿಸಲಿದೆ ಎಂಬ ಸೂಚನೆ ನೀಡಿದ್ದಾರೆ.


ಅವರು ಹಿಂದಿರುಗಲು ಕಾರಣ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಎಂದು ಹೇಳಲಾಗುತ್ತದೆ. ಆದ್ದರಿಂದ ಈಗ ಅಮೆರಿಕ ಇರಾನ್ ವಿರುದ್ಧ ನೇರವಾಗಿ ಯುದ್ಧಕ್ಕೆ ಪ್ರವೇಶಿಸಲು ತಯಾರಿ ನಡೆಸುತ್ತಿದೆ ಎಂದು ಊಹಿಸಲಾಗುತ್ತಿದೆ.

ಕೆನಡಾದಿಂದ ಹಿಂದಿರುಗುವಾಗ ಟ್ರಂಪ್ ತಮ್ಮ ಹೇಳಿಕೆಯಲ್ಲಿ, ‘ಪ್ರಚಾರ ಬಯಸುವ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಇರಾನ್-ಇಸ್ರೇಲ್ ನಡುವೆ ಕದನ ವಿರಾಮದ ಪ್ರಯತ್ನಕ್ಕಾಗಿ ಟ್ರಂಪ್ ಕೆನಡಾದಲ್ಲಿ ಜಿ7 ಶೃಂಗಸಭೆಯನ್ನು ತೊರೆದು ವಾಷಿಂಗ್ಟನ್‌ಗೆ ಹೋಗಿದ್ದಾಗಿ ಹೇಳಿದ್ದಾರೆ.

ಅದು ತಪ್ಪಾಗಿ ಹೇಳಿಕೆ. ನಾನು ಈಗ ವಾಷಿಂಗ್ಟನ್‌ಗೆ ಏಕೆ ಹೋಗುತ್ತಿದ್ದೇನೆ ಎಂದು ಅವರಿಗೆ ತಿಳಿದಿಲ್ಲ, ಆದರೆ ಅದಕ್ಕೂ ಕದನ ವಿರಾಮಕ್ಕೂ ಯಾವುದೇ ಸಂಬಂಧವಿಲ್ಲ. ಅದಕ್ಕಿಂತ ದೊಡ್ಡದು… ಎಂದು ಹೇಳುವ ಮೂಲಕ ಸಂಘರ್ಷದಲ್ಲಿ ಅಮೆರಿಕ ಎಂಟ್ರಿ ಕುರಿತು ಪರೋಕ್ಷವಾಗಿ ಹೇಳಿದ್ದಾರೆ.

ಇದಕ್ಕೂ ಮುನ್ನ ಟ್ರಂಪ್ ಸಾಧ್ಯವಾದಷ್ಟು ಬೇಗ ಟೆಹ್ರಾನ್ ತೊರೆಯುವಂತೆ ನಾಗರೀಕರಿಗೆ ಎಚ್ಚರಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.

ಅಧ್ಯಕ್ಷ ಟ್ರಂಪ್ ತಮ್ಮ ಹೇಳಿಕೆಯಲ್ಲಿ, ಎಮ್ಯಾನುಯೆಲ್ ಮ್ಯಾಕ್ರನ್‌ರನ್ನು ಖಂಡಿಸಿದ್ದಲ್ಲದೆ, ಇರಾನ್-ಇಸ್ರೇಲ್ ಸಂಘರ್ಷದ ಬಗ್ಗೆ ದೊಡ್ಡ ಸುಳಿವು ನೀಡಿದರು.

ಕದನ ವಿರಾಮ ಜಾರಿಗೆ ತರಲು ತಾನು ಅಮೆರಿಕಕ್ಕೆ ಹಿಂತಿರುಗುತ್ತಿಲ್ಲ ಮತ್ತು ಅದಕ್ಕಿಂತ ದೊಡ್ಡದನ್ನು ಮಾಡುವ ಉದ್ದೇಶದಿಂದ ಹೋಗುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಇದರರ್ಥ ಅಮೆರಿಕವು ಪ್ರಸ್ತುತ ಇರಾನ್ ಮತ್ತು ಇಸ್ರೇಲ್ ನಡುವೆ ಕದನ ವಿರಾಮವನ್ನು ಬಯಸುವುದಿಲ್ಲ ಮತ್ತು ಇದಕ್ಕಿಂತ ದೊಡ್ಡದನ್ನು ಮಾಡುವತ್ತ ಸಾಗುತ್ತಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧದ ಯುದ್ಧದಲ್ಲಿ ಇಸ್ರೇಲ್‌ಗೆ ಬಹಿರಂಗವಾಗಿ ಬೆಂಬಲ ನೀಡಿದ್ದಾರೆ. ಆದರೆ ಇಲ್ಲಿಯವರೆಗೆ ಅಮೆರಿಕ ಈ ದಾಳಿಗಳಲ್ಲಿ ತನ್ನ ನೇರ ಭಾಗವಹಿಸುವಿಕೆಯನ್ನು ನಿರಾಕರಿಸಿದೆ. ಅಮೆರಿಕದ ಆದ್ಯತೆಯೆಂದರೆ ಈ ಪ್ರದೇಶದಲ್ಲಿ ತನ್ನ ಪಡೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು.

ಆದರೆ ಟ್ರಂಪ್ ಅವರ ಇತ್ತೀಚಿನ ಹೇಳಿಕೆಯಿಂದ ಈಗ ಅಮೆರಿಕ ಈ ಯುದ್ಧದಲ್ಲಿ ತಟಸ್ಥವಾಗಿರಲು ಬಯಸುವುದಿಲ್ಲ ಮತ್ತು ಇರಾನ್ ವಿರುದ್ಧ ದೊಡ್ಡ ಹೆಜ್ಜೆ ಇಡಬಹುದು ಎಂದು ತೋರುತ್ತದೆ.

ಇಸ್ರೇಲ್ ಯುದ್ಧದಲ್ಲಿ ಅಮೆರಿಕದಿಂದ ಬಹಿರಂಗವಾಗಿ ಬೆಂಬಲವನ್ನು ಕೋರಿದೆ ಮತ್ತು ಅಮೆರಿಕ ಕೂಡ ಅದರ ಬಗ್ಗೆ ಯೋಚಿಸುತ್ತಿದೆ. ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ನಾಶಮಾಡಲು ಮಿಲಿಟರಿ ಕಾರ್ಯಾಚರಣೆಗೆ ಸೇರಲು ಇಸ್ರೇಲ್ ಅಮೆರಿಕಕ್ಕೆ ಮನವಿ ಮಾಡಿತ್ತು

. ಇನ್ನು ಜಿ7 ಶೃಂಗಸಭೆಯ ಸಂದರ್ಭದಲ್ಲಿಯೂ ಸಹ, ಎಲ್ಲಾ ದೇಶಗಳು ಇಸ್ರೇಲ್ ಅನ್ನು ಬಹಿರಂಗವಾಗಿ ಬೆಂಬಲಿಸಿವೆ. ಉದ್ವಿಗ್ನತೆಯನ್ನು ಕಡಿಮೆ ಮಾಡಲು ಇರಾನ್ ಮೇಲೆ ಒತ್ತಡ ಹೇರಿವೆ. ಜಿ7 ಸದಸ್ಯರು ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದರು.

ಇಸ್ರೇಲ್ ತನ್ನ ಆತ್ಮರಕ್ಷಣೆಗಾಗಿ ಕ್ರಮಗಳನ್ನು ತೆಗೆದುಕೊಳ್ಳುವ ಸಂಪೂರ್ಣ ಹಕ್ಕನ್ನು ಹೊಂದಿದೆ ಎಂದು ಸಹ ಹೇಳಲಾಗಿದೆ. ಇಸ್ರೇಲ್ ಜಿ7 ನ ಜಾಗತಿಕ ವೇದಿಕೆಯಿಂದ ಮುಕ್ತ ಬೆಂಬಲವನ್ನು ಪಡೆದಿದೆ. ಇದು ಇರಾನ್ ವಿರುದ್ಧದ ತನ್ನ ಉದ್ದೇಶಗಳನ್ನು ಬಲಪಡಿಸುತ್ತದೆ.

ಅಂತಹ ಪರಿಸ್ಥಿತಿಯಲ್ಲಿ, ಇರಾನ್ ಮೇಲೆ ನಡೆಯುತ್ತಿರುವ ದಾಳಿಗಳು ತೀವ್ರಗೊಳ್ಳಬಹುದು. ಅಲ್ಲದೆ, ಈ ಶೃಂಗಸಭೆಯ ಸಮಯದಲ್ಲಿ ಸದಸ್ಯ ರಾಷ್ಟ್ರಗಳ ನಾಯಕರೊಂದಿಗೆ ಉದ್ವಿಗ್ನತೆಯ ಬಗ್ಗೆ ಚರ್ಚಿಸಿದ ನಂತರ ಟ್ರಂಪ್ ಹಿಂತಿರುಗುತ್ತಿದ್ದಾರೆ.

ಅವರು ಕದನ ವಿರಾಮವನ್ನು ಸಹ ಉದ್ದೇಶಿಸಿಲ್ಲ, ಆದ್ದರಿಂದ ಟ್ರಂಪ್ ಈ ಯುದ್ಧವನ್ನು ಮುಂದಕ್ಕೆ ಕೊಂಡೊಯ್ಯಲು ಸಿದ್ಧರಿದ್ದಾರೆಯೇ. ಅವರು ತಮ್ಮ ಇತ್ತೀಚಿನ ಹೇಳಿಕೆಯಲ್ಲಿ, ರಾಜತಾಂತ್ರಿಕ ವಿಧಾನಗಳ ಮೂಲಕ ಯುದ್ಧವನ್ನು ಪರಿಹರಿಸಬೇಕೆಂದು ಪ್ರತಿಪಾದಿಸಿದ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಅವರನ್ನು ಖಂಡಿಸಿದರು.

Leave a comment

Leave a Reply

Your email address will not be published. Required fields are marked *

Related Articles

ಮ್ಯಾನ್ಮಾರ್‌ನಲ್ಲಿ ಭಾರತದ ಸರ್ಜಿಕಲ್ ಸ್ಟ್ರೈಕ್?: ಡ್ರೋನ್ ದಾಳಿಯಲ್ಲಿ ಉಲ್ಫಾ-ಐ ಕಮಾಂಡರ್ ನಯನ್ ಮೇಧಿ ಸೇರಿ 19 ಮಂದಿ ಸಾವು

ಮ್ಯಾನ್ಮಾರ್‌ನ ನಿಷೇಧಿತ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ-ಇಂಡಿಪೆಂಡೆಂಟ್ (ULFA) ತನ್ನ ಪೂರ್ವ ಪ್ರಧಾನ ಕಚೇರಿಯ...

ಪಾಕಿಸ್ತಾನದ ಐಎಸ್ ಐ ಜೊತೆಗೆ ಸಂಬಂಧ ಹೊಂದಿದ್ದ ಮೋಸ್ಟ್ ವಾಂಟೆಡ್ ಉಗ್ರ ಪವಿತ್ರ ಸಿಂಗ್ ಬಟಾಲ ಬಂಧನ

“ಪಾಕಿಸ್ತಾನದ ಐಎಸ್ ಐ ಜೊತೆಗೆ ಸಂಪರ್ಕ ಹೊಂದಿರುವ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್ (ಬಿಕೆಐ) ಸಂಘಟನೆಯೊಂದಿಗೆ ಸಂಬಂಧ...

ಕೈಲಾಸ ಮಾನಸ ಸರೋವರ ಯಾತ್ರೆ ಸೇತುವೆ ಕುಸಿತದಿಂದ ಗೈರಾ೦ಗ್ ಕೌಂಟಿಯಲ್ಲಿ ಸಿಲುಕಿಕೊಂಡ 23 ಯಾತ್ರಿಗಳು

“ಭೂಕುಸಿತದಿಂದಾಗಿ ಸೇತುವೆ ಕುಸಿದ ಪರಿಣಾಮ, ಕೈಲಾಸ ಮಾನಸಸರೋವರಕ್ಕೆ ತೆರಳುತ್ತಿದ್ದ 23 ಯಾತ್ರಿಕರ ಗುಂಪು ಟಿಬೆಟ್‌ನ ಗೈರಾಂಗ್...

ಲಷ್ಕರ್ ಎ ತೈಬಾ ಮುಖ್ಯಸ್ಥ ಹಫೀಜ್ ಸೈಯದ್ ಸಯೀದ್ ಪರಮಾಪ್ತ ಭಯೋತ್ಪಾದಕ ಮುಫ್ತಿ ಹಬೀಬುಲ್ಲಾ ಹಕ್ಕಾನಿ ಪಾಕಿಸ್ತಾನದಲ್ಲಿ ಮುಸುಕುಧಾರಿಗಳಿಂದ ಗುಂಡಿಕ್ಕಿ ಹತ್ಯೆ

“ಲಷ್ಕರ್-ಎ-ತೈಬಾ ಮುಖ್ಯಸ್ಥ ಹಫೀಜ್ ಸಯೀದ್ ಆಪ್ತ ಸಹಚರ ಮತ್ತು ಭಯೋತ್ಪಾದಕ ಮುಫ್ತಿ ಹಬೀಬುಲ್ಲಾ ಹಕ್ಕಾನಿಯನ್ನು ಪಾಕಿಸ್ತಾನದ...