ಹೊಂಡ ಗುಂಡಿ ಬಿದ್ದ ರಸ್ತೆ ಆಸ್ತಿ ತೆರಿಗೆ ಕಟ್ಟುವುದಿಲ್ಲ ಎಂದ ಸಾರ್ವಜನಿಕರು ಪಂಚಾಯತ್ ಸದಸ್ಯರ ಸ್ವಂತ ಹಣದಿಂದ ರಿಪೇರಿ

53

“ಸರ್ಜಾಪುರ ರಸ್ತೆಯ ಹಾಲನಾಯಕನಹಳ್ಳಿ ನಿವಾಸಿಗಳಿಗೆ ಬುಧವಾರ ಮಹತ್ವದ ದಿನವಾಗಿದೆ.

ಸುಮಾರು ಆರು ವರ್ಷಗಳಿಂದ ಹದಗೆಟ್ಟಿದ್ದ ರಸ್ತೆ ಸರಿಪಡಿಸುವಂತೆ ನಿರಂತರ ಒತ್ತಾಯದ ನಂತರ 3 ಕಿ. ಮೀ ರಸ್ತೆಯಲ್ಲಿದ್ದ 250 ಗುಂಡಿಗಳನ್ನು ಮೂರು ದಿನಗಳ ಕೆಲಸದ ಬಳಿಕ ಮುಚ್ಚಲಾಗಿದೆ

. ಆಸ್ತಿ ತೆರಿಗೆ ಕಟ್ಟುವುದಿಲ್ಲ ಎಂಬ ನಾಗರಿಕರಿಂದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಹಾಲನಾಯಕನಹಳ್ಳಿ ಪಂಚಾಯಿತಿಯ 15 ಸದಸ್ಯರು ತಮ್ಮ ಜೇಬಿನಿಂದ ಸುಮಾರು 5 ಲಕ್ಷ ರೂ. ಪಾವತಿಸಿದ್ದಾರೆ.

ಖಾಸಗಿ ಬಿಲ್ಡರ್ ಆದರ್ಶ್ ಬಿಲ್ಡರ್ಸ್ ಜನರಿಗಾಗಿ ಉಚಿತವಾಗಿ ಡಾಂಬರೀಕರಣ ಮಾಡಿರುವುದಾಗಿ ಸ್ಥಳೀಯರು ಹೇಳುತ್ತಾರೆ.

ದೊಡ್ಡಕನಹಳ್ಳಿ-ಚಿಕ್ಕನಾಯಕನಹಳ್ಳಿ ಮುಖ್ಯರಸ್ತೆ ಎಂದು ಕರೆಯಲ್ಪಡುವ ಈ ರಸ್ತೆಯು ವೈಟ್‌ಫೀಲ್ಡ್, ಬೆಳ್ಳಂದೂರಿನಿಂದ ಗಟಹಳ್ಳಿ ಮೂಲಕ ಎಲೆಕ್ಟ್ರಾನಿಕ್ ಸಿಟಿಗೆ ಹೋಗುವ ಶಾರ್ಟ್ ಕಟ್ ಆಗಿದೆ.

ಮಹಾದೇವಪುರ ವಲಯದಡಿ ಬರುವ ಇಲ್ಲಿ ಎಲ್ಲಾ ಬಿಬಿಎಂಪಿ ವಲಯಗಳಿಗಿಂತ ಅತಿ ಹೆಚ್ಚು ತೆರಿಗೆ ಪಾವತಿದಾರರು ಇದ್ದಾರೆ.


ಇಲ್ಲಿರುವ ಸುಮಾರು 8,000 ಕುಟುಂಬಗಳಿಗಾಗಿ ರಸ್ತೆ ಬೇಡಿಕೆಯನ್ನು ಬೆಂಗಳೂರು ಪೂರ್ವ ನಾಗರಿಕ ಸಂಘಟನೆಯೊಂದು ಮೊದಲು ಆರಂಭಿಸಿತು.

ಬಳಿಕ ಇತರ ಚಿಕ್ಕ ಸ್ವಯಂ ಸೇವಾ ಸಂಸ್ಥೆಗಳು ಕೂಡಾ ಇದಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದವು.

ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಸ್ವಯಂಸೇವಕ ಆರಿಫ್ ಮುದ್ಗಲ್, ಇಲ್ಲಿ ಮನೆಗಳನ್ನು ಖರೀದಿಸಿದ ಅನೇಕ ಐಟಿ ವೃತ್ತಿಪರರಿದ್ದಾರೆ. ರಸ್ತೆ ಮಾಡಿಸಲು ನೆರವಾಗುವಂತೆ ಪ್ರತಿಯೊಬ್ಬರನ್ನು ಸಂಪರ್ಕಿಸಿದ್ದೇವೆ

. ಅರವಿಂದ ಲಿಂಬಾವಳಿ ಶಾಸಕರಾಗಿದ್ದಾಗ ಭೇಟಿಯಾಗಿದ್ದೆವು ಮತ್ತು ಇತ್ತೀಚೆಗೆ ಅವರ ಪತ್ನಿ ಮಂಜುಳಾ ಎಸ್ ಲಿಂಬಾವಳಿ ಅವರನ್ನು ಭೇಟಿಯಾದಾಗ ನಮಗೆ ಹಣ ಮೀಸಲಿಟ್ಟಿಲ್ಲ ಎಂದು ಹೇಳಿದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿರುವ ಡಿಸಿಎಂ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದ್ದೇವು. ಆದರೆ ಯಾವುದೇ ಪ್ರಯೋಜನವಾಗಿಲ್ಲ

. ಈ ಬಾರಿ ರಸ್ತೆ ಸರಿಪಡಿಸದಿದ್ದರೆ ಆಸ್ತಿ ತೆರಿಗೆ ಕಟ್ಟುವುದಿಲ್ಲ ಎಂದು ಪಂಚಾಯತ್‌ಗೆ ಹೇಳಿದ್ದೇವು ಎಂದು ತಿಳಿಸಿದರು. ವಿವಿಧ ಗುಂಪುಗಳ ಸ್ವಯಂಸೇವಕರು ಕೂಡಾ ಹಣ ಕ್ರೋಡೀಕರಿಸಿ ಗುಂಡಿ ಮುಚ್ಚುವ ನಿರ್ಧಾರ ಕೈಗೊಂಡಿದ್ದರು.

ಕೊನೆಗೆ ಎಚ್ಚೆತ ಪಂಚಾಯಿತಿ ಸದಸ್ಯರು, ಈ ರಸ್ತೆ ಪಿಡಬ್ಲ್ಯುಡಿ ಇಲಾಖೆ ವ್ಯಾಪ್ತಿಗೆ ಬಂದರೂ ಜನರಿಗಾಗಿ ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆ ಸರಿಪಡಿಸಲು ನಿರ್ಧರಿಸಿದ್ದಾರೆ

. ಕಳೆದ ವಾರ ಸತತ ಎರಡು ದಿನ ಕೆಲಸ ನಡೆದಿದ್ದು, ಬುಧವಾರ (ಡಿಸೆಂಬರ್ 12) ಸಾರ್ವಜನಿಕ ರಜೆ ಘೋಷಿಸಿದ್ದರಿಂದ ಕಾಮಗಾರಿ ಪೂರ್ಣಗೊಂಡಿದೆ.

ಸವಿತಾ ರೆಡ್ಡಿ ಹಾಲನಾಯಕನಹಳ್ಳಿ ಪಂಚಾಯಿತಿ ಅಧ್ಯಕ್ಷೆಯಾಗಿದ್ದಾರೆ. ರಸ್ತೆಯಲ್ಲಿನ ಗುಂಡಿನ ಮುಚ್ಚಲು ರೂ.5 ಲಕ್ಷ ಖರ್ಚು ಮಾಡಿದ್ದೇವೆ.

ಇದಕ್ಕಾಗಿ ನಮ್ಮ ಕುಟುಂಬದವರು ಹಾಗೂ ಪಂಚಾಯಿತಿ ಸದಸ್ಯರು ತುಂಬಾ ನೆರವು ನೀಡಿದ್ದಾರೆ.

ಖಾಸಗಿ ಬಿಲ್ಡರ್ ಆದರ್ಶ್ ಬಿಲ್ಡರ್ಸ್ ಜನರಿಗಾಗಿ ಉಚಿತವಾಗಿ ಡಾಂಬರು ಕೆಲಸಕ್ಕೆ ಒಪ್ಪಿಕೊಂಡಿತು ಎಂದು ಸವಿತಾ ರೆಡ್ಡಿ ಪತಿ ವಿ ಬಾಬು ರೆಡ್ಡಿ ತಿಳಿಸಿದರು.

Leave a comment

Leave a Reply

Your email address will not be published. Required fields are marked *

Related Articles

ಸನ್ನಡತೆಯ ಆಧಾರದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ರಾಜ್ಯದ ಕಾರಾಗೃಹಗಳಲ್ಲಿರುವ 30 ಕೈದಿಗಳ ಬಿಡುಗಡೆ ಆದೇಶ

“ಜೀವಾವಧಿ ಶಿಕ್ಷೆಗೆ ಗುರಿಯಾಗಿ ರಾಜ್ಯದ ಬೇರೆಬೇರೆ ಕಾರಾಗೃಹಗಳಲ್ಲಿರುವ 30 ಕೈದಿಗಳನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆಗೊಳಿಸಿ ರಾಜ್ಯ...

ಬಳ್ಳಾರಿ ಬ್ಯಾನರ್ ಗಲಾಟೆ ನಿನ್ನೆ ಅಧಿಕಾರ ಸ್ವೀಕರಿಸಿದ್ದ ಬಳ್ಳಾರಿ ಎಸ್ಪಿ ಪವನ್ ನೆಜ್ಜೂರ್ ಅಮಾನತು

ಬೆಂಗಳೂರು: ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕಾಂಗ್ರೆಸ್ ಕಾರ್ಯಕರ್ತ ಗುಂಡೇಟಿಗೆ ಬಲಿಯಾದ...

2025 ರಲ್ಲಿ ರಾಜ್ಯದಲ್ಲಿ ನಿರ್ಲಕ್ಷದ ಚಾಲನೆಗಾಗಿ 5947 ವಾಹನ ಚಾಲನಾ ಪರವಾನಿಗೆ ರದ್ದು

ಬೆಂಗಳೂರು: ಕರ್ನಾಟಕದ ಸಾರಿಗೆ ಇಲಾಖೆಯು 2025 ರಲ್ಲಿ ಕರ್ನಾಟಕದಾದ್ಯಂತ 5,947 ಚಾಲನಾ ಪರವಾನಗಿಗಳನ್ನು (DL) ಅಮಾನತುಗೊಳಿಸಿದೆ....

ಬೆಂಗಳೂರಿನಲ್ಲಿ 2.50 ಕೋಟಿ ರೂ. ಮೌಲ್ಯದ ಡ್ರಗ್ಸ್, ನಗದು ಜಪ್ತಿ ವಿದೇಶಿ ಪ್ರಜೆ ಬಂಧನ

ಬೆಂಗಳೂರು: ಹೊಸ ವರ್ಷಾಚರಣೆಗೂ ಮುನ್ನ, ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು...