ಸಂಸ್ಥೆಯ ಉದ್ಯೋಗಿಗೆ ಹಣೆಯಲ್ಲಿ ಹಚ್ಚಿರುವ ತಿಲಕ ತೆಗೆಯುವಂತೆ ಒತ್ತಾಯಿಸಿದ ಮುಸ್ಲಿಂ ಸಹೋದ್ಯೋಗಿ ಕ್ರೋಮಾ ಸಂಸ್ಥೆ ವಿರುದ್ಧ  ಹಿಂದೂಪರ ಸಂಘಟನೆಗಳಿಂದ  ವ್ಯಾಪಕ ಆಕ್ರೋಶ

74

“ಜೂನ್ 7ರಂದು ಈದ್-ಉಲ್-ಅಝಾ ಸಂದರ್ಭದಲ್ಲಿ ಮುಂಬೈನ ಭಂಡಪ್ ಪಶ್ಚಿಮದಲ್ಲಿರುವ ಕ್ರೋಮಾ ಅಂಗಡಿಯಲ್ಲಿ ಉದ್ವಿಗ್ನತೆ ಭುಗಿಲೆದ್ದಿತು.

ಉದ್ಯೋಗಿಯೊಬ್ಬರಿಗೆ ತಮ್ಮ ತಿಲಕ ಒರೆಸಲು ಹಿರಿಯ ಉದ್ಯೋಗಿ ರಶೀದ್ ಹೇಳಿರುವ ವಿಡಿಯೋ ಇದೀಗ ವೈರಲ್ ಆಗಿದ್ದು ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಜಿತೇಶ್ ಶರ್ಮಾ ಎಂಬ ಯುವಕನಿಗೆ ರಶೀದ್ ತನ್ನ ಹಣೆಯ ಮೇಲಿನ ಧಾರ್ಮಿಕ ಗುರುತು ತೆಗೆದು ಅಂಗಡಿಯೊಳಗೆ ಬಾ… ಇಲ್ಲದಿದ್ದರೆ ಕೆಲಸದಿಂದ ತೆಗೆಯುವುದಾಗಿ ಎಂದು ಹೇಳಿದ್ದಾನೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆದ ನಂತರ ಹಿಂದೂ ಪರ ಸಂಘಟನೆಗಳು ಕೆರಳಿವೆ.

ಅಂಗಡಿ ಮುಂದೆ ಜಮಾಯಿಸಿದ ಹಿಂದೂ ಕಾರ್ಯಕರ್ತರು ಸಿಬ್ಬಂದಿ ಜೊತೆ ವಾಗ್ವಾದ ನಡೆದಿದರು. ಈ ಕೂಡಲೇ ರಶೀದ್ ಕ್ಷಮೆಯಾಚಿಸಬೇಕು. ಅಲ್ಲದೆ ವ್ಯವಸ್ಥಾಪಕರು ರಶೀದ್ ಗೆ ಎಚ್ಚರಿಕೆ ನೀಡಬೇಕೆಂದು ಒತ್ತಾಯಿಸಿದರು

. ಯಾವುದೇ ಉದ್ಯೋಗಿ ತಮ್ಮ ಧರ್ಮವನ್ನು ಆಚರಿಸಿದ್ದಕ್ಕಾಗಿ ನಾಚಿಕೆಪಡಬಾರದು ಎಂದು ಒತ್ತಿ ಹೇಳಿದರು.

ಇನ್ನು ವಿಡಿಯೋ ವೈರಲ್ ಆಗಿದ್ದು ಇದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಭಾರತ, ಮಧ್ಯಪ್ರಾಚ್ಯವಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಜಿತೇಶ್ ಶರ್ಮಾ ಈ ಬಗ್ಗೆ ಇನ್ನೂ ಯಾವುದೇ ಪೊಲೀಸ್ ದೂರು ದಾಖಲಿಸಿಲ್ಲ. ಈ ಘಟನೆಯು ಕೆಲಸದ ಸ್ಥಳದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.

ವಿಶೇಷವಾಗಿ ಭಾರತದಂತಹ ಜಾತ್ಯತೀತ ರಾಷ್ಟ್ರದಲ್ಲಿ ನಂಬಿಕೆ ಆಧಾರಿತ ಅಭಿವ್ಯಕ್ತಿಗಳನ್ನು ಪಾಲಿಸುವ ಬದಲು ಗೌರವಿಸಬೇಕು ಎಂದು ಹಲವರು ಒತ್ತಿ ಹೇಳಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಜಾರ್ಜ್ ಕುರಿಯನ್

“ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ಅವರು ತಮ್ಮ ರಾಜ್ಯಸಭಾ ಅವಧಿ ಅಂತ್ಯವಾದ...

ಬೆಂಗಳೂರಿಗೆ ಬರಲಿದೆ ಬುಲೆಟ್ ಟ್ರೈನ್ ದೇಶದಲ್ಲಿ ಏಳು ಹೊಸ ಬುಲೆಟ್ ರೈಲು ಯೋಜನೆಗಳನ್ನು ಘೋಷಣೆ ಮಾಡಿದ ಕೇಂದ್ರ ಸರಕಾರ

“ನವದೆಹಲಿ: ಕೇಂದ್ರ ಸರ್ಕಾರ ದೇಶದಲ್ಲಿ ಏಳು ಹೊಸ ಬುಲೆಟ್ ರೈಲು ಯೋಜನೆಗಳನ್ನು ಘೋಷಣೆ ಮಾಡಿದ್ದು, ಸದ್ಯ...

ಕಾಶಿ ಗಂಜ್ ಶಹೀದಾ ಮಸೀದಿ ತೆರವುಗೊಳಿಸುವಂತೆ ನೋಟಿಸ್ ಜಾರಿ ಮಾಡಿದ ರೈಲ್ವೇ ಇಲಾಖೆ

ವಾರಣಾಸಿ: ವಾರಣಾಸಿಯ ಕಾಶಿ ರೈಲು ನಿಲ್ದಾಣದ ಮುಖ್ಯ ಪ್ರವೇಶದ್ವಾರದ ಸಮೀಪದಲ್ಲಿರುವ ಗಂಜ್ ಶಹೀದಾ ಮಸೀದಿಯನ್ನು ತೆರವುಗೊಳಿಸುವಂತೆ...

ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದಿಪ್ಕೆಗೆ ಸಾರ್ವಜನಿಕವಾಗಿ ಕಪಾಳಮೋಕ್ಷ

“ಜೈಪುರ: ನೀಟ್ ಪರೀಕ್ಷಾ ಅವಾಂತರದ ವಿರುದ್ಧ ಪ್ರತಿಭಟನೆಗೆ ತೆರಳಿದ್ದ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್...