ಕೊಡವೂರು ವಾರ್ಡ ಸರಕಾರಿ ಕೆರೆ ಅಭಿವೃದ್ಧಿಗೆ ಕಾಂಗ್ರೆಸ್ ಮುಖಂಡನ ತಡೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ

3

ಕೊಡವೂರು ವಾರ್ಡಿನಲ್ಲಿ ಸಮಗ್ರವಾಗಿ ಅಭಿವೃದ್ದಿ ಆಗಬೇಕು ಕೇವಲ ಕಾಂಕ್ರೀಟ್ ರಸ್ತೆ, ಬಿಲ್ಡಿಂಗ್ ಮಾತ್ರ ಅಲ್ಲ ಬದಲಾಗಿ ಪರಿಸರದ ಜಲ ಸಂರಕ್ಷಣೆ ಪರಿಸರದ ಬಗ್ಗೆ ಜಾಗೃತಿಯಾಗಬೇಕು

ಸರಕಾರದ ನಗರಸಭಾ ಅನುದಾನದ ಮುಖಾಂತರ ಕೊಡವೂರಿನಲ್ಲಿ ಕೆರೆಯ ನಿರ್ಮಾಣಕ್ಕೆ 87 ಲಕ್ಷ ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯವಾಗಿ ಕೊಡವೂರಿನ ಲಕ್ಷ್ಮೀ ನಗರದ ಸಿರಿಕುಮಾರ ಕೆರೆಗೆ ಮಂಜೂರಾತಿ ಆಗಿತ್ತು.

ಆದರೆ ಅಭಿವೃದ್ಧಿಯನ್ನು ಸಹಿಸಲಾಗದ ಕಾಂಗ್ರೆಸ್ ಮುಖಂಡ ಟೆಂಡರ್ ದಾರರನ್ನು ಕರೆದು ಈ ಸ್ಥಳದಲ್ಲಿ ದೈವ ಸಮಸ್ಯೆಗಳಿದ್ದು ಈ ಸ್ಥಳದಲ್ಲಿ ಕೆಲಸವನ್ನು ಮಾಡಿದರೆ ನಿನಗೂ ಇಲ್ಲಿಯ ಸಮಸ್ಯೆ ಬರುತ್ತದೆ ಎಂದು ಹೆದರಿಸಿ ಕೆಲಸವನ್ನು ನಿಲ್ಲಿಸುವ ಕೆಲಸವನ್ನು ಕಾಂಗ್ರೆಸ್ ಮುಖಂಡ ಮಾಡಿದ್ದಾನೆಎನ್ನುವ ಆರೋಪ ಸ್ಥಳೀಯರದ್ದು.

ಸರಕಾರಿ ಜಾಗದಲ್ಲಿ ಅಬಿವೃದ್ದಿ ಕೆಲಸವನ್ನು ನಿಲ್ಲಿಸಿದ್ದಾರೆ. ಮಾಜಿ ನಗರಸಭಾ ಅಧ್ಯಕ್ಷೆ ಯ ಪತಿ ಕಾಂಗ್ರೆಸ್ ಮುಖಂಡನ ಇಂತಹ ಕೆಲಸಕ್ಕೆ ಸ್ಥಳೀಯ ನಾಗರಿಕರಿಗೆ ನೋವು ತಂದಿದೆ.

ಕೊಡವೂರು ವಾರ್ಡಿನಲ್ಲಿ ಅನೇಕ ಅಬಿವೃದ್ದಿ ಕಾರ್ಯದ ಮೂಲಕ 2 ಕೆರೆಗೆ ಕಲ್ಲು ಕಟ್ಟಿಸುವ ಕಾರ್ಯ ನಡೆದಿದ್ದು, ಕೊಡವೂರು ವಾರ್ಡಿನಲ್ಲಿ ನಡೆಯುವ ಅಭಿವೃದ್ದಿ, ಸೇವಾ ಕಾರ್ಯವನ್ನು ಗಮನಿಸಿ ಕಾಂಗ್ರೆಸ್ ಮುಖಂಡನ ನಡೆಗೆ ನಾಗರಿಕರು ವಿರೋಧವನ್ನು ಮಾಡಿದ್ದಾರೆ.

ಇದು ಕೇವಲ ಒಂದು ಪಕ್ಷಕ್ಕೆ ತಡೆ ತರುವುದು ಮಾತ್ರವಲ್ಲ ಇದು ಕೊಡವೂರಿನ ಸಮಗ್ರ ಅಭಿವೃದ್ಧಿಗೆ ತಡೆ ತರುವುದು ಆಗಿದೆ ಎಂದು ಸ್ಥಳೀಯರು ಹಿಡಿಶಾಪ ಹಾಕಿದ್ದಾರೆ.

ಈ ಬಗ್ಗೆ ಸ್ಥಳೀಯ ನಗರಸಭಾ ಸದಸ್ಯರಾದ ಶ್ರೀ ವಿಜಯ್ ಕೊಡವೂರು ಅವರನ್ನು ಮಾತನಾಡಿಸಿದಾಗ ಈ ಬಗ್ಗೆ ಅಂತರ್ ಜಲ ಹೆಚ್ಚು ಮಾಡಿ ಸ್ಥಳೀಯ ಭಾಗದಲ್ಲಿ ನೀರಿನ ಕೊರತೆ ದೂರ ಮಾಡುವ,

ಉದ್ದೇಶದಿಂದ ಹಾಗೂ ಸಂಜೆ ವೇಳೆಗೆ ಈ ಭಾಗದ ವಯೋವೃದ್ಧರು, ಮಕ್ಕಳು ಮತ್ತು ಸಾರ್ವಜನಿಕರಿಗೆ ವಾಯು ವಿಹಾರಕ್ಕೆ ಅನುಕೂಲ ಮಾಡಿಕೊಡುವ ವಾಕಿಂಗ್ ಟ್ರಾಕ್ ನಿರ್ಮಾಣ ಮಾಡುವ ಉದ್ದೇಶದಿಂದ ಈ ಕಾಮಗಾರಿ ಆರಂಭ ಮಾಡಲಾಗಿತ್ತು

ಇದಕ್ಕೆ ತೊಂದರೆ ಉಂಟು ಮಾಡಿರುವುದು ನಿಜಕ್ಕೂ ಬೇಸರ ತಂದಿದ್ದೆ ಇನ್ನಾದರೂ ಅಭಿವೃದ್ದಿ ಯೋಜನೆ ಗಳ ಅನುಷ್ಠಾನ ಗಳಲ್ಲಿ ರಾಜಕೀಯ ಮಾಡದೆ ನಮ್ಮ ಜೊತೆ ಅಂತಹ ವ್ಯಕಿ ಗಳು ಕೈ ಜೋಡಿಸುವಂತಾಗಲಿ  ಎಂದು ಮಾದ್ಯಮ ಗಳಿಗೆ ತಿಳಿಸಿದ್ದಾರೆ

Leave a comment

Leave a Reply

Your email address will not be published. Required fields are marked *

Related Articles

ಹಿಂದೂ ಮುಖಂಡ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ರಾಜ್ಯದ 18 ಸ್ಥಳಗಳಲ್ಲಿ ಎನ್ಐಎ ದಾಳಿ

ನವದೆಹಲಿ: ಬಜರಂಗದಳ ಸದಸ್ಯ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಶನಿವಾರ...

ಪರಶುರಾಮ್ ಥೀಮ್ ಪಾರ್ಕ್ ವಿಚಾರದಲ್ಲಿ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರ ಗೊಂದಲದ ನಡೆ ಕೂಡಲೆ ಸೃಷ್ಟಿಕರಣ ನೀಡಿ ::ನಿತಿನ್ ಪೂಜಾರಿ ಆಗ್ರಹ

ಧಾರ್ಮಿಕ ನಂಬಿಕೆಯ ಹೋರಾಟಕ್ಕೆ ರಾಜಕೀಯ ಬಣ್ಣ ಬೇಡ : ಉದಯಕುಮಾರ್ ಶೆಟ್ಟಿ ಅವರು ಸಲ್ಲಿಸಿದ ಹೈಕೋರ್ಟ್...

ಧರ್ಮಸ್ಥಳ 6ನೇ ಪಾಯಿಂಟ್ ನಲ್ಲಿ ಅಸ್ಥಿಪಂಜರ ಪತ್ತೆ

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದೆ. ಪ್ರಕರಣದ...

ಧರ್ಮಸ್ಥಳ ಆಗೆದ ಸ್ಥಳದಲ್ಲಿ ಸಿಗದ ಅವಶೇಷಗಳು ಕಾರ್ಯಾಚರಣೆ ನಾಳೆಗೆ ಮುಂದೂಡಿದ ಎಸ್ಐಟಿ

“ಧರ್ಮಸ್ಥಳ ರಹಸ್ಯ ಸಮಾಧಿ ಪ್ರಕರಣದ ತನಿಖೆ ನಿರ್ಣಾಯಕ ಹಂತ ತಲುಪಿದ್ದು, ಪ್ರಕರಣದ ಸಾಕ್ಷಿ-ದೂರುದಾರನಾಗಿರುವ ವ್ಯಕ್ತಿ ಶವಗಳನ್ನು...