ಉಡುಪಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಗುಂಪು ಗಲಾಟೆ ಭಯದ ವಾತಾವರಣ ನಿರ್ಮಾಣ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

67

ಮಾಯಾ ಆರ್, ಇವರು ಉಡುಪಿ ಜಿಲ್ಲಾ ಮತ್ತು ಸತ್ರಾ ನ್ಯಾಯಾಲಯದಲ್ಲಿ ಹಿರಿಯ ಶಿರೇಸ್ತದಾರರಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ

ಉಡುಪಿ ಜಿಲ್ಲಾ ಮತ್ತು ಸತ್ರಾ ನ್ಯಾಯಾಲಯದ ಆವರಣದ ಮುಂದೆ 10 ರಿಂದ 20 ಜನರು ಗುಂಪು ಸೇರಿಕೊಂಡಿದ್ದು, ಅವರನ್ನು ವಿಚಾರಿಸಿದಾಗ ಅವರುಗಳು ಮಾನ್ಯ ಎಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯದ Ex Case No 297/2023 ರಲ್ಲಿ ಡೆಲವರಿ ವಾರೆಂಟ್ ಕಾರ್ಯಗತಗೊಳಿಸುವ ಸಂಬಂಧ

ಮಾನ್ಯ ಜಿಲ್ಲಾ ಮತ್ತು ಸತ್ರಾ ನ್ಯಾಯಾಲಯದ ನ್ಯಾಯಾಧೀಶರನ್ನು ಭೇಟಿ ಆಗಲು ಮುಂದಾಗಿರುವುದಾಗಿ ತಿಳಿಸಿದ್ದು, ಅದಕ್ಕೆ ಫಿರ್ಯಾದುದಾರರು ನ್ಯಾಯಾಧೀಶರ ಅನುಮತಿಯನ್ನು ಪಡೆಯದೇ ಯಾರು ಭೇಟಿ ಆಗಲು ಸಾಧ್ಯವಿಲ್ಲ

ನ್ಯಾಯಾಲಯದ ಆದೇಶವನ್ನು ಎಲ್ಲರೂ ಸಹಾ ಪಾಲಿಸಬೇಕು ಎಂದು ತಿಳಿಸಿದರೂ ಕೂಡ Ex Case No 297/2023 ರಲ್ಲಿನ ಪ್ರಕರಣಕ್ಕೆ ಸಂಬಂಧಿಸಿದ J.Dr’s ಗಳು ಹಾಗೂ ಇತರರನ್ನು ಒಳಗೊಂಡ ಅಕ್ರಮ ಗುಂಪು ಸೇರಿಕೊಂಡು

ಜಿಲ್ಲಾ ಮತ್ತು ಸತ್ರಾ ನ್ಯಾಯಾಲಯದ ಆವರಣದ ಮುಂದೆ ಗಲಾಟೆ-ಸೃಷ್ಟಿಸಿ ಗೊಂದಲ ಉಂಟುಮಾಡಿ ನ್ಯಾಯಾಲಯದ ಕಾರ್ಯಕಲಾಪಗಳಿಗೆ ಅನಗತ್ಯ ಅಡ್ಡಿಪಡಿಸಿರುವುದಲ್ಲದೇ

ಸ್ಥಳದಲ್ಲಿ ಭಯದ ವಾತವಾರಣ ಸೃಷ್ಟಿಮಾಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 0055/2025 u/s 189(2) , 221 ಜೊತೆಗೆ 190 ಬಿಎನ್ ಎಸ್ ರಂತೆ ಪ್ರಕರಣ ದಾಖಲಾಗಿದೆ.

Leave a comment

Leave a Reply

Your email address will not be published. Required fields are marked *

Related Articles

ಕಾರ್ಕಳ ಟೈಗರ್ಸ್ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ರಕ್ತದೊತ್ತಡ–ಮಧುಮೇಹ ತಪಾಸಣೆ ಶಿಬಿರ

ಕಾರ್ಕಳ ಟೈಗರ್ಸ್ ಹಾಗೂ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಬ್ರಹತ್...

ಶ್ರೀ ಧೂಮಾವತಿ ಯುವಕ ಮಂಡಲ ನಿಟ್ಟೂರು ಆಶ್ರಯದಲ್ಲಿ ಉಚಿತ ನೇತ್ರ ಹಾಗೂ ಆರೋಗ್ಯ ತಪಾಸಣಾ ಶಿಬಿರ

ಶ್ರೀ ಧೂಮಾವತಿ ಯುವಕ ಮಂಡಲ(ರಿ), ವಿಷ್ಣುಮೂರ್ತಿ ನಗರ ನಿಟ್ಟೂರು, ಶ್ರೀಹರಿ ನೇತ್ರಾಲಯ, ಕಾರ್ತಿಕ್ ಎಸ್ಟೇಟ್ ಅಂಬಲಪಾಡಿ...

ರಾಜ್ಯ ಕಂಬಳ ಅಸೋಸಿಯೇಷನ್ ವತಿಯಿಂದ ಯುವಜನ ಕ್ರೀಡಾ ಸಬಲೀಕರಣ ಇಲಾಖೆ ಪ್ರಧಾನ ಕಾರ್ಯದರ್ಶಿ ಭೇಟಿ

ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ, ರಾಜ್ಯ ಯುವಜನ...

ಬೈಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಶಿಶಿರ್ ಶೆಟ್ಟಿ ಆಯ್ಕೆ

“ಬೈಲೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಬೈಲೂರು ಇಲ್ಲಿಯ ಹಳೆ ವಿದ್ಯಾರ್ಥಿ ಸಂಘವು ಪುನರ್...