ಯೂರೋಪ್ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಭುಗಿಲೆದ್ದ ಜನಸಾಮಾನ್ಯರ ಪ್ರತಿಭಟನೆಗಳು
ಭಾರತದಲ್ಲಿ ಪ್ರತಿಭಟನೆಗಳು ನಡೆಯುತ್ತಿರುವಂತೆ ವಿಶ್ಯಾದ್ಯಂತ ಹಲವು ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ಕೆಲವೆಡೆ ವಿದ್ಯಾರ್ಥಿಗಳಿಂದಲೇ ಪ್ರತಿಭಟನೆಯ ಕಿಡಿ ಹೊತ್ತಿದೆ. ಶಿಕ್ಷಣ ನಿರ್ಲಕ್ಷ್ಯ, ಬೆಲೆ ಏರಿಕೆ, ಜೀವನ ವೆಚ್ಚ...

ವಿಶ್ವದ ವಿವಿಧ ದೇಶಗಳಲ್ಲಿ ಸರ್ಕಾರಗಳ ನೀತಿ ಹಾಗೂ ಬೆಲೆ ಏರಿಕೆಯ ವಿರುದ್ಧ ಸಾರ್ವಜನಿಕರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಫ್ರಾನ್ಸ್‌ನಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಿಕ್ಷಣದ ಗುಣಮಟ್ಟಕ್ಕಾಗಿ ಪ್ರತಿಭಟಿಸುತ್ತಿದ್ದರೆ, ಬೆಲ್ಜಿಯಂ, ಆಲ್ಬೇನಿಯಾ ಮತ್ತು ಅರ್ಜೆಂಟೀನಾದಲ್ಲಿಯೂ ವಿದ್ಯಾರ್ಥಿಗಳೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಟಲಿ, ಪೋರ್ಚುಗಲ್ ಹಾಗೂ ಟರ್ಕಿಯಲ್ಲಿ ಕಾರ್ಮಿಕರು ಮತ್ತು ನಿವೃತ್ತರು ವೇತನ ಹಾಗೂ ಜೀವನ ವೆಚ್ಚದ ಸಮಸ್ಯೆಗಳಿಗಾಗಿ ಧ್ವನಿ ಎತ್ತಿದ್ದಾರೆ. ಅಮೆರಿಕದಲ್ಲಿ ಟ್ರಂಪ್ ಸರ್ಕಾರದ ನೀತಿಗಳ ವಿರುದ್ಧ ನೋ ಕಿಂಗ್ಸ್ ನೆಟ್‌ವರ್ಕ್ ಪ್ರತಿಭಟನೆಗಳನ್ನು ಹಮ್ಮಿಕೊಂಡಿದೆ.




