ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ರಾಜಕೀಯ

ಕೋಲಾರ: ಗೌರವ ಡಾಕ್ಟರೇಟ್ ಸ್ವೀಕರಿಸಿದ ಸಿದ್ದರಾಮಯ್ಯ, ಡಾಕ್ಟರ್ ಎಂದು ಕರೆಯಬೇಡಿ ಎಂದ ಮಾಜಿ ಸಿಎಂ

ಮಾತನಾಡಿದ ಸಿದ್ದರಾಮಯ್ಯ, ನಾನು ಡಾಕ್ಟರೇಟ್ ಬೇಡ ಅಂತ ಹೇಳಿದ್ದೆ.ಸ್ವೀಕಾರ ಮಾಡೋದಾ ಬೇಡ್ವಾ ಅಂತ ಇದ್ದೆ. ಆದ್ರೂ ನನಗೆ RL ಜಾಲಪ್ಪ ಕಾಲೇಜಿನವರು ಗೌರವ ಡಾಕ್ಟರೇಟ್ ನೀಡಿದ್ದಾರೆ. RL ಜಾಲಪ್ಪ ಕಾಲೇಜಿನವರಿಗೆ ಧನ್ಯವಾದಗಳು....

· ಕೋಲಾರ
ಇನ್ಮೇಲೆ ನನ್ನ ಡಾಕ್ಟರ್​ ಸಿದ್ದರಾಮಯ್ಯ ಅಂತ ಕರೀಬೇಡಿ: ಮಾಜಿ ಸಿಎಂ ನಗೆ ಚಟಾಕಿ
ಹಂಚಿಕೊಳ್ಳಿ:

ಕೋಲಾರದಲ್ಲಿ ನಡೆದ ಆರ್.ಎಲ್. ಜಾಲಪ್ಪ ಆಸ್ಪತ್ರೆಯ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೇವರಾಜ ಅರಸು ಮೆಡಿಕಲ್ ಕಾಲೇಜು ಗೌರವ ಡಾಕ್ಟರೇಟ್ ಪ್ರದಾನ ಮಾಡಿತು. ಕಳೆದ ಒಂದು ವರ್ಷದ ಹಿಂದೆಯೇ ಈ ಗೌರವ ಘೋಷಣೆಯಾಗಿದ್ದರೂ, ಸಿದ್ದರಾಮಯ್ಯ ಅದನ್ನು ಸ್ವೀಕರಿಸಲು ಹಿಂದೇಟು ಹಾಕಿದ್ದರು. ಅಂತಿಮವಾಗಿ ಎಲ್ಲರ ಒತ್ತಾಯದ ಮೇರೆಗೆ ಅಕ್ಟೋಬರ್ 19 ರಂದು ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಮಗೆ ಡಾಕ್ಟರ್ ಎಂಬ ಬಿರುದು ಬೇಡವೆಂದು ತಿಳಿಸಿ, ಸಿದ್ದರಾಮಯ್ಯ ಎಂದೇ ಕರೆಯುವಂತೆ ಹಾಸ್ಯದ ಧಾಟಿಯಲ್ಲಿ ಮನವಿ ಮಾಡಿದರು.

ಹಂಚಿಕೊಳ್ಳಿ: