ಮುಖ್ಯ ವಿಷಯಕ್ಕೆ ಹೋಗಿ
The Karnataka Today
7 Oct
Latest
ರಾಜಕೀಯ

'ಎರಡು ತಲೆಯ ನಾಗರ ಹಾವನ್ನು ನೋಡಬೇಕೇ? ನಿಯ್ಯತ್ತಿಲ್ಲದ ನಾಯಿ ಎಂದು ಬೈದರೆ, ನಾಯಿಗೆ ಅವಮಾನ ಮಾಡಿದಂತೆ'

ಬೆಂಗಳೂರು: ಎರಡು ತಲೆಯ ನಾಗರ ಹಾವನ್ನು ನೋಡಬೇಕೇ? ತಪ್ಪದೇ ಈ ವಿಡಿಯೋ ನೋಡಿ. ನಿಯ್ಯತ್ತಿಲ್ಲದ ನಾಯಿ ಅಂತ ಬೈದರೆ, ನಾಯಿಗೆ ಅವಮಾನ ಮಾಡಿದಂತೆ. ಹಾಗಾಗಿ ನಾವು ಆ ಭಾಷೆ ಬಳಸೋದಿಲ್ಲ ಎಂದು ಕಾಂಗ್ರೆಸ್ ಮುಖಂಡ ರಕ್ಷಾ ರಾಮಯ್ಯ...

· ಬೆಂಗಳೂರು ನಗರ
'ಎರಡು ತಲೆಯ ನಾಗರ ಹಾವನ್ನು ನೋಡಬೇಕೇ? ನಿಯ್ಯತ್ತಿಲ್ಲದ ನಾಯಿ ಎಂದು ಬೈದರೆ, ನಾಯಿಗೆ ಅವಮಾನ ಮಾಡಿದಂತೆ'
ಹಂಚಿಕೊಳ್ಳಿ:

ಬೆಂಗಳೂರು: ಎರಡು ತಲೆಯ ನಾಗರ ಹಾವನ್ನು ನೋಡಬೇಕೇ? ತಪ್ಪದೇ ಈ ವಿಡಿಯೋ ನೋಡಿ. ನಿಯ್ಯತ್ತಿಲ್ಲದ ನಾಯಿ ಅಂತ ಬೈದರೆ, ನಾಯಿಗೆ ಅವಮಾನ ಮಾಡಿದಂತೆ. ಹಾಗಾಗಿ ನಾವು ಆ ಭಾಷೆ ಬಳಸೋದಿಲ್ಲ ಎಂದು ಕಾಂಗ್ರೆಸ್ ಮುಖಂಡ ರಕ್ಷಾ ರಾಮಯ್ಯ ಬ್ರಿಗೇಡ್ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಹರಿಹಾಯ್ದಿದೆ.

ಮಿ. ಪ್ರದೀಪ್‌ ಈಶ್ವರ್...‌ ಎಲ್ಲಾ ಮರೆತು ಹೋಯ್ತೆನಪ್ಪ? ಆತವಾ ತಲೆಯಲ್ಲಿ ಕೋಡು ಬೆಳೀತಾ? ಕಾಂಗ್ರೆಸ್‌ ಪಕ್ಷ ಅಂದ್ರೆ ಏನಂತ ತಿಳ್ಕೊಂಡಿದೀಯ? ರಕ್ಷಾ ರಾಮಯ್ಯ ಅವರ ಬಗ್ಗೆ ಬಹಿರಂಗವಾಗಿ ಮಾತಾಡುವಷ್ಟು ಧೈರ್ಯ ಬಂತೇ? ಇದೇ ಎಂಪಿ ಚುನಾವಣೆ ನಡೀತಿದ್ದಾಗ "ರಕ್ಷಾ ಅಣ್ಣ" ಅಂತಿದ್ದ ನಾಲಿಗೆ ಈಗ ಉದ್ದವಾಗಿದ್ಯಲ್ಲ? ಏನ್‌ ಸಮಾಚಾರ? ಎಂದು ಪ್ರಶ್ನಸಿದೆ.

ರಾಜ್ಯದಲ್ಲಿ ತಳ ಸಮುದಾಯದ ಹುಡುಗನೊಬ್ಬ ಶಾಸಕನಾಗಿ ತುಂಬಾ ಧೈರ್ಯವಾಗಿ ಮಾತಾಡ್ತಿದ್ದಾನೆ, ಇಂತಹ ಯುವಕರು ಮುಂದೆ ಬರಬೇಕು, ಮುಂದಿನ ತಲೆಮಾರಿಗೆ ಮಾದರಿಯಾಗಬೇಕು ಅಂತ ಬಯಸಿದ್ವಿ. ತಾವು ಮೆಗಾಸ್ಟಾರ್‌ ತರ ಡೈಲಾಗ್‌ ಹೊಡ್ಕೊಂಡು ತಿಂದ ಮನೆಗೆ ದ್ರೋಹ ಬಗೆಯೋ ಕೆಲ್ಸ ಮಾಡ್ತಿರೋದನ್ನ ನೋಡಿದ್ರೆ "ಒಬ್ಬ ಜನ ಪ್ರತಿನಿಧಿ ಹೇಗಿರಬಾರದು?" ಅನ್ನೋದಕ್ಕೆ ಉತ್ತರವಾಗಿ ನಿನ್ನನ್ನೇ ತೋರಿಸಬಹುದು.

ನಿನಗೆ ತೆಲುಗಿನಲ್ಲಿ ಒಂದು ಮಾತು ಹೇಳ್ತೀನಿ ಕೇಳು. ಪಾಪ ತೆಲುಗು ಸಿನಿಮಾ ನೋಡಿ ನೋಡಿ ನೆಟ್ಟು ಬೋಲ್ಟು ಲೂಸಾದಂಗಿದೆ. ನಿನ್ನ ಸೌಂಡ್‌ ವಿರೋಧ ಪಕ್ಷವರ ಮೇಲೆ ಇರಲಿ. ಸ್ವ ಪಕ್ಷದವರ ಮೇಲಲ್ಲ. ಮತ್ತೊಮ್ಮೆ ರಕ್ಷಾ ರಾಮಯ್ಯ ಅವರ ಬಗ್ಗೆ ಮಾತಾಡುವ ಮುನ್ನ ಎಚ್ಚರಿಕೆ. ನೀನು ಮಾತಾಡಿದ್ರೆ ಮಾತ್ರ ಟ್ರೋಲ್‌ ಆಗತ್ತೆ. ನಾವು ಕೆಮ್ಮಿದ್ರೂ ಟ್ರೋಲ್‌ ಆಗತ್ತೆ ಎಚ್ಚರಿಕೆ ಎಂದು ವಾರ್ನಿಂಗ್ ನೀಡಿದೆ.

ಹಂಚಿಕೊಳ್ಳಿ: