ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಸುದ್ದಿ

ಶಿವಪುರ: ಡಿಸೆಂಬರ್ ಅಂತ್ಯದೊಳಗೆ ಹೆದ್ದಾರಿ ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಸಂಸದ ಕೋಟ ಸೂಚನೆ

ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಮುಗಿಸಿ – ಸಂಸದ ಕೋಟ ಸೂಚನೆ. ಹೆದ್ದಾರಿಗೆ ಜಾಗ ಕೊಟ್ಟವರ ಸಮಸ್ಯೆ ಶೀಘ್ರ ಬಗೆಹರಿಸಿ ಜಿಲ್ಲಾಧಿಕಾರಿಗೆ ಸೂಚನೆ. ಶಿವಪುರ : ಹಲವು ದಿನಗಳಿಂದ ನೆನಗುದ್ದಿಗೆಗೆ ಬಿದ್ದಿರುವ ಹೆಬ್ರಿ ತಾಲ್ಲೂ...

· ಉಡುಪಿ
ಶಿವಪುರ : ಸಂಸದ ಕೋಟ ಶ್ರೀನಿವಾಸ ಪೂಜಾರಿ ರಾಷ್ಟ್ರೀಯ ಹೆದ್ದಾರಿ ಸೇತುವೆ ಕಾಮಗಾರಿ ವೀಕ್ಷಣೆ.
ಹಂಚಿಕೊಳ್ಳಿ:

ಉಡುಪಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಶಿವಪುರ ಭಾಗದಲ್ಲಿ ನಡೆಯುತ್ತಿರುವ ಸೇತುವೆ ಕಾಮಗಾರಿಯನ್ನು ಶನಿವಾರ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪರಿಶೀಲಿಸಿದರು. ಈ ಕಾಮಗಾರಿಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕೆಂದು ಅವರು ಹೆದ್ದಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಪೆರ್ಡೂರು ಪಾಡಿಗಾರ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಮರ ತೆರವುಗೊಳಿಸಲು ಅರಣ್ಯ ಇಲಾಖೆ ಅನುಮತಿ ನೀಡಿರುವುದರಿಂದ ಕಾಮಗಾರಿಯನ್ನು ಚುರುಕುಗೊಳಿಸುವಂತೆ ಅವರು ಸೂಚಿಸಿದರು. ಇದೇ ವೇಳೆ ಜಮೀನು ಕಳೆದುಕೊಂಡ ಮೂರ್ಸಾಲು ಮೋಹನದಾಸ ನಾಯಕ್ ಹಾಗೂ ವಸಂತ ವಾಗ್ಲೆ ಅವರ ಸಮಸ್ಯೆಗಳನ್ನು ಬಗೆಹರಿಸುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿದರು. ಆತ್ರಾಡಿ ಪ್ರದೇಶದ ಸಾರ್ವಜನಿಕರ ಮನವಿಯ ಮೇರೆಗೆ ವಿಶೇಷ ತಿರುವು ನಿರ್ಮಿಸುವ ಕುರಿತೂ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿದರು.

ಹಂಚಿಕೊಳ್ಳಿ: