ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಸುದ್ದಿ

ಬೆಂಗಳೂರಿನಲ್ಲಿ ಆಯುಧ ಪೂಜೆಗೆ ಕಾವೇರಿ ನೀರು ಬಳಸಿದರೆ 5000 ರೂಪಾಯಿ ದಂಡ

ಆಯುಧ ಪೂಜೆ ಸಂಭ್ರಮದಲ್ಲಿರುವ ಜನರಿಗೆ ಸರ್ಕಾರ ಶಾಕ್ ನೀಡಿದೆ. ಆಯುಧಪೂಜೆ ದಿನ ಕಾವೇರಿ ನೀರು ಬಳಕೆ ಮಾಡುವಂತಿಲ್ಲ. ವಾಹನ ತೊಳೆಯಲು ಸೇರಿದಂತೆ ಇತರ ಕಾರಣಗಳಿಗೆ ನೀರು ಪೋಲು ಮಾಡಿದರೆ 5000 ರೂ ದಂಡದ ಎಚ್ಚರಿಕೆ ನೀಡಲಾಗಿದೆ...

· ಬೆಂಗಳೂರು ನಗರ
ಆಯುಧ ಪೂಜೆಗೆ ಕಾವೇರಿ ನೀರು ಬಳಕೆ ಮಾಡಿದರೆ ಹುಷಾರ್, ಬರೋಬ್ಬರಿ 5 ಸಾವಿರ ರೂ ದಂಡ ಎಚ್ಚರಿಕೆ
ಹಂಚಿಕೊಳ್ಳಿ:

ಆಯುಧ ಪೂಜೆಯ ಸಂದರ್ಭದಲ್ಲಿ ವಾಹನಗಳನ್ನು ತೊಳೆಯಲು ಕಾವೇರಿ ನೀರನ್ನು ಬಳಸದಂತೆ ಬೆಂಗಳೂರು ಜಲಮಂಡಳಿ ಅಧ್ಯಕ್ಷೆ ಮಂಜುಳಾ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕುಡಿಯುವ ನೀರನ್ನು ಅನಗತ್ಯವಾಗಿ ಪೋಲು ಮಾಡುವವರ ವಿರುದ್ಧ ಕಾಯ್ದೆ 1964ರ ಕಲಂ 109ರ ಅನ್ವಯ 5000 ರೂಪಾಯಿ ದಂಡ ವಿಧಿಸಲಾಗುವುದು ಎಂದು ತಿಳಿಸಲಾಗಿದೆ. ಹಬ್ಬದ ದಿನಗಳಲ್ಲಿ ಮಾರ್ಷಲ್ ಮತ್ತು ಅಧಿಕಾರಿಗಳು ನಗರದಾದ್ಯಂತ ಗಸ್ತು ತಿರುಗಲಿದ್ದು, ನಿಯಮ ಉಲ್ಲಂಘಿಸುವವರಿಗೆ ಸ್ಥಳದಲ್ಲೇ ದಂಡ ವಿಧಿಸಲಾಗುತ್ತದೆ. ಈ ಆದೇಶವನ್ನು ಮತ್ತೆ ಉಲ್ಲಂಘಿಸಿದರೆ ಹೆಚ್ಚುವರಿಯಾಗಿ 500 ರೂಪಾಯಿ ದಂಡವನ್ನು ವಿಧಿಸಲಾಗುವುದು ಎಂದು ಎಚ್ಚರಿಸಲಾಗಿದೆ.

ಹಂಚಿಕೊಳ್ಳಿ: