ಶಿವಮೊಗ್ಗ: ದಸರಾ ಜಂಬೂ ಸವಾರಿಗೆ ಸಜ್ಜಾದ ಸಾಗರ್, ಸೋಮಣ್ಣ ಮತ್ತು ಬಹದ್ದೂರ್ ಆನೆಗಳು
ಶಿವಮೊಗ್ಗ: ನಗರದಲ್ಲಿ (Shivamogga) ದಸರಾ (Dasara) ಹಬ್ಬದ ಸಂಭ್ರಮ ಕಳೆಗಟ್ಟಿದೆ. ಜಂಬೂ ಸವಾರಿಗಾಗಿ ಆನೆಗಳ (Elephant) ತಂಡಕ್ಕೆ ಅಂಬಾರಿ ಹೊರುವ ಹಾಗೂ ಕುಮ್ಕಿ ಆನೆಗಳಿಗೆ ತರಬೇತಿ ಆರಂಭಿಸಲಾಗಿದೆ. ಆನೆ ಬಿಡಾರದ ವೈದ...

ಶಿವಮೊಗ್ಗ ನಗರದಲ್ಲಿ ನಡೆಯಲಿರುವ ದಸರಾ ಹಬ್ಬದ ಜಂಬೂ ಸವಾರಿಗೆ ಅರಣ್ಯ ಇಲಾಖೆ ಸಿದ್ಧತೆಗಳನ್ನು ಆರಂಭಿಸಿದೆ. ಡಾ. ಮುರಳಿ ಮನೋಹರ್ ಅವರ ಮಾರ್ಗದರ್ಶನದಲ್ಲಿ ಸಕ್ರೆಬೈಲು ಬಿಡಾರದ ಸಾಗರ್, ಸೋಮಣ್ಣ ಹಾಗೂ ಬಹದ್ದೂರ್ ಆನೆಗಳಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ತಾಲೀಮು ನೀಡಲಾಗುತ್ತಿದೆ. ಸಾರ್ವಜನಿಕರ ನಡುವೆ ಆನೆಗಳು ಯಾವುದೇ ಅಡೆತಡೆಯಿಲ್ಲದೆ ಸಂಚರಿಸುವಂತೆ ಅಭ್ಯಾಸ ಮಾಡಿಸಲಾಗುತ್ತಿದೆ. ಈ ಬಾರಿ ಸಾಗರ್ ಆನೆ ಅಂಬಾರಿ ಹೊತ್ತು ಸಾಗಲಿದ್ದು, ಅಕ್ಟೋಬರ್ 21ರ ಬುಧವಾರ ಶಿವಮೊಗ್ಗ ಮಹಾನಗರ ಪಾಲಿಕೆಯ ನೇತೃತ್ವದಲ್ಲಿ ವೈಭವದ ಮೆರವಣಿಗೆ ನಡೆಯಲಿದೆ.




