ಮಂಗಳೂರು: ಸೈಂಟ್ ಆಗ್ನೇಸ್ ಕಾಲೇಜು ವಿವಾದಕ್ಕೆ ಕ್ಷಮೆಯಾಚಿಸಲಿ ಶಾಸಕ ವೇದವ್ಯಾಸ ಕಾಮತ್
ಮಂಗಳೂರು, ಅ.16: ನಗರದ ಸೈಂಟ್ ಆಗ್ನೇಸ್ ಕಾಲೇಜಿನ ಪರೀಕ್ಷಾ ವೇಳಾಪಟ್ಟಿಯಂತಹ ಶೈಕ್ಷಣಿಕ ವಿಷಯವನ್ನು ರಾಜಕೀಯ, ಧಾರ್ಮಿಕ ಸಂಘರ್ಷವನ್ನಾಗಿಸುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ... The post ಶಾಸಕ ವೇದವ್ಯಾಸ ಕಾಮತ್ ಜನತೆ,...

ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನ ಪರೀಕ್ಷಾ ವಿಷಯವನ್ನು ರಾಜಕೀಯ ಮತ್ತು ಧಾರ್ಮಿಕ ಸಂಘರ್ಷವನ್ನಾಗಿಸಿದ ಶಾಸಕ ವೇದವ್ಯಾಸ ಕಾಮತ್ ಅವರು ಸಾರ್ವಜನಿಕರಲ್ಲಿ ಹಾಗೂ ಕಾಲೇಜಿನ ಆಡಳಿತ ಮಂಡಳಿಯಲ್ಲಿ ಕ್ಷಮೆ ಕೇಳಬೇಕೆಂದು ಕೆಪಿಸಿಸಿ ವಕ್ತಾರ ವಿನಯರಾಜ್ ಆಗ್ರಹಿಸಿದ್ದಾರೆ. ದಸರಾ ರಜೆಯ ಸಂದರ್ಭದಲ್ಲಿ ಪರೀಕ್ಷೆ ನಡೆಸಿದ ವಿಚಾರವನ್ನು ಹಿಂದೂ ವಿರೋಧಿ ಎಂದು ಬಿಂಬಿಸಿ ಎಬಿವಿಪಿ ಕಾರ್ಯಕರ್ತರ ಮೂಲಕ ಪ್ರತಿಭಟನೆ ನಡೆಸಲು ಶಾಸಕರು ಕುಮ್ಮಕ್ಕು ನೀಡಿದ್ದಾರೆ ಎಂದು ಅವರು ಆರೋಪಿಸಿದರು. ಇದೇ ವೇಳೆ, ಇತರ ಸ್ವಾಯತ್ತ ಕಾಲೇಜುಗಳಲ್ಲೂ ಇದೇ ದಿನ ಪರೀಕ್ಷೆ ನಡೆದಿದ್ದರೂ ಅಲ್ಲಿ ಪ್ರತಿಭಟನೆ ಮಾಡದಿರುವುದು ಬಿಜೆಪಿ ಮತ್ತು ಸಂಘ ಪರಿವಾರದ ಧರ್ಮಾಧಾರಿತ ರಾಜಕಾರಣಕ್ಕೆ ಸಾಕ್ಷಿಯಾಗಿದೆ ಎಂದು ವಿನಯರಾಜ್ ಟೀಕಿಸಿದರು.




