ಮೈಸೂರು ಬನ್ನಿಮಂಟಪದಲ್ಲಿ 3,500 ಡ್ರೋನ್‌ಗಳ ಅದ್ಭುತ ಪ್ರದರ್ಶನ
ಮೈಸೂರು: ದಸರಾ (Mysuru Dasara) ಅಂಗವಾಗಿ ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಅತ್ಯಾಕರ್ಷಕ ಡ್ರೋನ್ ಪ್ರದರ್ಶನ (Drone Show) ನಡೆಯಿತು. ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಆಧುನಿಕ ತಂತ್ರಜ್ಞಾನದ ಸಂ...

ಮೈಸೂರಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ದಸರಾ ಹಬ್ಬದ ಪ್ರಯುಕ್ತ ಭವ್ಯವಾದ ಡ್ರೋನ್ ಪ್ರದರ್ಶನ ನಡೆಯಿತು. ಒಟ್ಟು 3,500 ಡ್ರೋನ್‌ಗಳನ್ನು ಬಳಸಿ ಆಕಾಶದಲ್ಲಿ 12 ಬಗೆಯ ಆಕರ್ಷಕ ದೃಶ್ಯಗಳನ್ನು ಸೃಷ್ಟಿಸಲಾಯಿತು. ಇಲ್ಲಿ ಗ್ಯಾಲಕ್ಸಿ, ಸೈನಿಕ, ಸಿಂಹ, ಚಿಟ್ಟೆ ಹಾಗೂ ನವಿಲಿನ ಚಿತ್ರಣಗಳು ಪ್ರೇಕ್ಷಕರನ್ನು ರಂಜಿಸಿದವು. ವಿಶೇಷವಾಗಿ ನವಿಲಿನ ವಿನ್ಯಾಸದ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸುವ ನಿಟ್ಟಿನಲ್ಲಿ ಈ ಪ್ರದರ್ಶನವನ್ನು ಆಯೋಜಿಸಲಾಗಿತ್ತು.




