ಮುಖ್ಯ ವಿಷಯಕ್ಕೆ ಹೋಗಿ
The Karnataka Today
9 Oct
ಸುದ್ದಿ
ಸುದ್ದಿ

ಕ್ರೈಸ್ಟ್ ಕಿಂಗ್ ಶಾಲೆ: ವಿದ್ಯಾರ್ಥಿಗಳಿಗೆ ಧ್ಯಾನ ಮತ್ತು ಏಕಾಗ್ರತೆಯ ವಿಶೇಷ ತರಬೇತಿ!

ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗಾಗಿ ಧ್ಯಾನ ಮತ್ತು ಏಕಾಗ್ರತೆ ಎಂಬ ವಿಷಯದಲ್ಲಿ ತರಬೇತಿ ಮತ್ತು ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನ ಅರೋಹ ಸ್ಪೇಸ್ ಅಕಾಡೆಮಿಯ ಯೋಗ...

· ಉಡುಪಿ
ಕ್ರೈಸ್ಟ್ ಕಿಂಗ್: ಧ್ಯಾನ ಮತ್ತು ಏಕಾಗ್ರತೆ ತರಬೇತಿ ಕಾರ್ಯಕ್ರಮ
ಹಂಚಿಕೊಳ್ಳಿ:

ಕಾರ್ಕಳದ ಕ್ರೈಸ್ಟ್ ಕಿಂಗ್ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಧ್ಯಾನ ಮತ್ತು ಏಕಾಗ್ರತೆ ಕುರಿತಾದ ತರಬೇತಿ ಹಾಗೂ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬೆಂಗಳೂರಿನ ಅರೋಹ ಸ್ಪೇಸ್ ಅಕಾಡೆಮಿಯ ಯೋಗ ತರಬೇತುದಾರರಾದ ಪ್ರಿಯಾ ಕೆ.ವಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ನಿರ್ವಹಿಸಿದರು.

ತರಬೇತಿಯಲ್ಲಿ ಮಾತನಾಡಿದ ಅವರು, "ಮನಸ್ಸಿನಲ್ಲಿರುವ ನಕಾರಾತ್ಮಕ ಆಲೋಚನೆಗಳನ್ನು ಹೋಗಲಾಡಿಸಿ ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ಸು ಗಳಿಸಲು ಧ್ಯಾನವು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳಾದ ನೀವು ನಿರಂತರವಾಗಿ ಧ್ಯಾನ ಮಾಡುವ ಮೂಲಕ ಕ್ರಿಯಾಶೀಲ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ" ಎಂದು ತಿಳಿಸಿದರು. ಇದರ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ ಧ್ಯಾನದ ತರಬೇತಿ ನೀಡಲಾಯಿತು.

ಈ ವೇಳೆ ಸಂಸ್ಥೆಯ ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಜೋಸ್ನಾ ಸ್ನೇಹಲತಾ ಉಪಸ್ಥಿತರಿದ್ದರು. ಪ್ರೌಢ ಶಾಲಾ ವಿಭಾಗದ ಶಿಕ್ಷಕಿ ರೇಖಾಸಂತೋಷ್ ಕಾರ್ಯಕ್ರಮವನ್ನು ನಿರೂಪಿಸಿದರು.

ಹಂಚಿಕೊಳ್ಳಿ: