ಹೆಬ್ರಿಯ ರೋಹಿತ್ ಶೆಟ್ಟಿ ಲಂಡನ್ ಅವರಿಗೆ ಯುಕೆ ಬಂಟ್ಸ್ ಸಂಘದಿಂದ ವಿಶೇಷ ಗೌರವ ಪ್ರಶಸ್ತಿ
ಹೆಬ್ರಿ : ಯುಕೆ ಬಂಟ್ಸ್ ಸಂಘದ ವತಿಯಿಂದ ನಡೆದ ಸಮಾರಂಭದಲ್ಲಿ ವಿಶೇಷ ಸಾಧನೆ ಮಾಡಿರುವ ಹೆಬ್ರಿ ಮೂಲದ ರೋಹಿತ್ ಶೆಟ್ಟಿ ಲಂಡನ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರೋಹಿತ್ ಅವರು ಕಳೆದ 15 ವರ್ಷಗಳಿಗೂ ಹೆಚ್ಚು ಕಾ...

ಕಳೆದ ಹದಿನೈದು ವರ್ಷಗಳಿಂದ ಕ್ರೀಡಾ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಹೆಬ್ರಿ ಮೂಲದ ರೋಹಿತ್ ಶೆಟ್ಟಿ ಲಂಡನ್ ಅವರನ್ನು ಯುಕೆ ಬಂಟ್ಸ್ ಸಂಘ ಸನ್ಮಾನಿಸಿದೆ. ಅವರು ಮೂರು ಪೂರ್ಣ ಮ್ಯಾರಥಾನ್‌ಗಳನ್ನು ಪೂರೈಸಿದ್ದು, ಈ ಬಾರಿ ನ್ಯಾಷನಲ್ ಆಟಿಸ್ಟಿಕ್ ಸೊಸೈಟಿಗಾಗಿ ಧನಸಹಾಯ ಸಂಗ್ರಹಿಸುವ ಮೂಲಕ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಬಹುಮುಖ ಸಾಧನೆಯನ್ನು ಗುರುತಿಸಿ ನ್ಯೂಯಾರ್ಕ್‌ನ ವೈದ್ಯ ಡಾ. ದಿನಕರ ಬೆಳ್ಳೆ ರೈ ಅವರು ಪ್ರಶಸ್ತಿ ಪ್ರದಾನ ಮಾಡಿದರು. ನೀರೆ ಕೃಷ್ಣ ಶೆಟ್ಟಿ ಮತ್ತು ಚಾರ ರಮಣಿ ಶೆಟ್ಟಿ ದಂಪತಿಯ ಪುತ್ರರಾದ ರೋಹಿತ್ ಶೆಟ್ಟಿ ಅವರು ಕ್ರೀಡೆ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.




