ಹೆಬ್ರಿ ವಿಪ್ರ ಬಾಂಧವರಿಂದ ಪಾದಯಾತ್ರೆಗೆ ಚಾಲನೆ!
ಹೆಬ್ರಿ ಪಾದಯಾತ್ರೆ ಸಮಿತಿಯ ವಿಪ್ರರು ಲೋಕಕಲ್ಯಾಣಕ್ಕಾಗಿ ಸತತ 9ನೇ ವರ್ಷ ಹೆಬ್ರಿ ಶ್ರೀ ಅನಂತಪದ್ಮನಾಭ ದೇವರ ಸನ್ನಿಧಿಯಿಂದ ಉಡುಪಿ ಶ್ರೀಕೃಷ್ಣನ ಸನ್ನಿಧಿಗೆ ವಿಷ್ಣು ಸಹಸ್ರನಾಮ ಸ್ತೋತ್ರ, ಕೃಷ್ಣ ಮಂತ್ರ ಜಪ, ಲಕ್ಷೀಶೋಭಾನ...

ಹೆಬ್ರಿ ಪಾದಯಾತ್ರೆ ಸಮಿತಿಯ ವಿಪ್ರರು ಲೋಕಕಲ್ಯಾಣಕ್ಕಾಗಿ ಸತತ 9ನೇ ವರ್ಷ ಹೆಬ್ರಿ ಶ್ರೀ ಅನಂತಪದ್ಮನಾಭ ದೇವರ ಸನ್ನಿಧಿಯಿಂದ ಉಡುಪಿ ಶ್ರೀಕೃಷ್ಣನ ಸನ್ನಿಧಿಗೆ ವಿಷ್ಣು ಸಹಸ್ರನಾಮ ಸ್ತೋತ್ರ, ಕೃಷ್ಣ ಮಂತ್ರ ಜಪ, ಲಕ್ಷೀಶೋಭಾನೆ ಪಠಿಸುತ್ತಾ ಸುಮಾರು 25ಕ್ಕೂ ಮಿಕ್ಕಿ ವಿಪ್ರ ಬಾಂಧವರು ಗಿಲ್ಲಾಳಿ ವಿದ್ವಾನ್ ವಿಷ್ಣು ಮೂರ್ತಿ ಆಚಾರ್ಯರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿದರು.
ಈ ಸಂದರ್ಭದಲ್ಲಿ ವಡ್ಡಮೇಶ್ವರ ಮಠದಲ್ಲಿ ನವನೀತ ಕೃಷ್ಣ ದೇವರ ಸನ್ನಿಧಿ, ಪೆರ್ಡೂರು ಶ್ರೀ ಅನಂತಪದ್ಮನಾಭ ದೇವರ ಸನ್ನಿಧಿ ಮತ್ತು ಪುತ್ತಿಗೆ ಮಠದ ನರಸಿಂಹ ಹಾಗೂ ವಿಠ್ಠಲ ದೇವರ ಸನ್ನಿಧಿಗೆ ತೆರಳಿ ನಂತರ ಉಡುಪಿ ಶ್ರೀಕೃಷ್ಣ ಮುಖ್ಯಪ್ರಾಣ ಸನ್ನಿಧಿಯಲ್ಲಿ ಪಾದಯಾತ್ರಾರ್ಥಿಗಳು ಭಜನೆ – ವಿಷ್ಣು ಸಹಸ್ರನಾಮ ಪಾರಾಯಣ ದೊಂದಿಗೆ ಸಂಪನ್ನಗೊಳಿಸಿದರು.
ಪುತ್ತಿಗೆ ಮಠದ ಕಿರಿಯ ಶ್ರೀಪಾದರಾದ ಶ್ರೀ ಶ್ರೀ ಸುಶ್ರೀಂದ್ರ ತೀರ್ಥರು ಆಶೀರ್ವಚನಗೈದು, ದೇವರ ಅನುಗ್ರಹವನ್ನು ಪಡೆಯಲು ವಿವಿಧ ಮಾರ್ಗಗಳನ್ನು ಋಷಿ ಮುನಿಗಳು ತಿಳಿಸಿದ್ದಾರೆ. ಕಲಿಯುಗದಲ್ಲಿ ಶಾಸ್ತ್ರೋಕ್ತವಾಗಿ ದೇಹದಂಡನೆ , ಉಪವಾಸದ ಕ್ರಮವನ್ನು ತಿಳಿಸಿ, ಸಾಧನಾ ಶರೀರದಿಂದ ಭಗವಂತನ ಆರಾಧನೆಯನ್ನು ಪಾದಯಾತ್ರೆಯ ಮೂಲಕ ದೇವರ ಸಂದರ್ಶನವು ಕೂಡಾ ಅತ್ಯಂತ ಮಹತ್ವವನ್ನು ಪಡೆಯುತ್ತದೆ. ಈ ನಿಟ್ಟಿನಲ್ಲಿ ಲೋಕಕಲ್ಯಾಣ ಮತ್ತು ಸನಾತನ ಧರ್ಮದ ರಕ್ಷಣೆಯಾಗಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೆಬ್ರಿ ಪರಿಸರದ ವಿಪ್ರರಾದ ಸುದರ್ಶನ ಜೋಯಿಸ್, ಪ್ರಕಾಶ್ ಭಟ್, ವೆಂಕಟರಮಣ ಕಲ್ಕೂರ್, ನರಸಿಂಹ ಹೇರಳೆ, ಸುಬ್ರಹ್ಮಣ್ಯ ಆಚಾರ್ಯ, ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ, ವಿದ್ಯಾಲಕ್ಷ್ಮೀ ಆಚಾರ್ಯ, ರಾಘವೇಂದ್ರ ಭಟ್ ಉಪ್ಪಳ, ಪ್ರಶಾಂತ ಭಟ್ ಪುಟಾಣಿಗಳಾದ ಸುಮಧ್ವ ಮತ್ತು ಮಹತಿ ಭಟ್ ಮೊದಲಾದವರು ಭಾಗವಹಿಸಿದ್ದರು.





