Delhi CJP Protest: ದೆಹಲಿಯಲ್ಲಿಂದು ಮೆಟ್ರೋ, ರೈಲು ಅಷ್ಟೇ ಅಲ್ಲ, ಈ ಎಲ್ಲ ಸೇವೆಗಳು ಬಂದ್!
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಇದರಿಂದಾಗಿ ಮೆಟ್ರೋ, ರೈಲು, ಇಂಟರ್‌ನೆಟ್, ಶಾಲಾ-ಕಾಲೇಜುಗಳು ಹಾಗೂ ಮದ್ಯದಂಗಡಿಗಳನ್ನು ಮುಚ್ಚಲಾಗಿ...

Delhi CJP Protest Today: ಇಂದು ಅಕ್ಟೋಬರ್ 10 ರಂದು ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆ ಹಿನ್ನೆಲೆ ಕೇಂದ್ರ ಸರ್ಕಾರಿ ಭಾರೀ ಭದ್ರತಾ ಕ್ರಮ ಕೈಗೊಂಡಿದೆ ಹೀಗಾಗಿ ದೆಹಲಿಗೆ ಹೊರಡುವ ಪ್ರಯಾಣಿಕರು ದೆಹಲಿಯನ್ನ ಸ್ಥಿತಿಯನ್ನ ಮುಂಚಿತವಾಗಿ ತಿಳಿದುಕೊಳ್ಳುವ ಬಹಳ ಮುಖ್ಯ. ಇಂದು ಯಾವ್ಯಾವ ಸೇವೆಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಸಿಇಸಿ ಜ್ಞಾನೇಶ್ ಕುಮಾರ್(CEC Gyanesh Kumar) ವಿರುದ್ಧದ ಪ್ರತಿಭಟನೆಗೆ ಸಿಜೆಪಿ ಕರೆ ನೀಡಿರುವ ಹಿನ್ನೆಲೆ ರಾಜಧಾನಿ ದೆಹಲಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಇದರ ಪರಿಣಾಮವಾಗಿ ಮೆಟ್ರೋ, ರೈಲು, ಇಂಟರ್‌ನೆಟ್ ಅಲ್ಲದೆ ಮದ್ಯದಂಗಡಿಗಳನ್ನು ಸಹ ಮುಚ್ಚಲಾಗಿದೆ. ಸಂಚಾರ ನಿರ್ಬಂಧ ಬಿಗಿಗೊಂಡ ಹಿನ್ನೆಲೆ ಕೆಲವು ಶಾಲೆ ಕಾಲೇಜುಗಳು ಮುಚ್ಚಿವೆ. ಅಂತಹ ಶಾಲೆಗಳೂ ಆನ್‌ಲೈನ್ ತರಗತಿಗಳು ಅಥವಾ ಪರೀಕ್ಷೆಗಳನ್ನು ಕೂಡ ಸ್ಥಗಿತಗೊಳಿಸಲು ನಿರ್ಧರಿಸಿವೆ.
ದೆಹಲಿಯಲ್ಲಿಂದು ಬ್ಯಾಂಕ್‌ಗಳು ಬಂದ್, ಪ್ರತಿಭಟನೆ ಕಾರಣವಲ್ಲ
ದೆಹಲಿಯಲ್ಲಿ ಇಂದು ಬ್ಯಾಂಕುಗಳು ಮುಚ್ಚಲ್ಪಟ್ಟಿವೆ. ಆದರೆ ಇದಕ್ಕೆ ಕಾರಣ ಕೇವಲ ಪ್ರತಿಭಟನೆಗಳಲ್ಲ. ಅಕ್ಟೋಬರ್ 10 ತಿಂಗಳ ಎರಡನೇ ಶನಿವಾರ, ಆದ್ದರಿಂದ ಆರ್‌ಬಿಐ ನಿಯಮಗಳ ಪ್ರಕಾರ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳು ಮುಚ್ಚಿರುತ್ತವೆ. ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು ಹೊರತುಪಡಿಸಿ, ಸಾಮಾನ್ಯವಾಗಿ ಪ್ರತಿ ಭಾನುವಾರ ಬ್ಯಾಂಕುಗಳು ಮುಚ್ಚಿರುತ್ತವೆ. ಆದರೆ ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಯುಪಿಐನಂತಹ ಡಿಜಿಟಲ್ ಸೇವೆಗಳು ಎಂದಿನಂತೆ ಕಾರ್ಯನಿರ್ವಹುತ್ತವೆ.
ಮದ್ಯದಂಗಡಿಗಳು ಕ್ಲೋಸ್
ದೆಹಲಿಯಲ್ಲಿರುವ ಎಲ್ಲಾ ಚಿಲ್ಲರೆ ಮದ್ಯದಂಗಡಿಗಳನ್ನು ಅಕ್ಟೋಬರ್ 9 ಮತ್ತು 10 ರಂದು ಮುಚ್ಚುವಂತೆ ಆದೇಶಿಸಲಾಗಿದೆ. ಇದರಲ್ಲಿ ಭಾರತೀಯ, ವಿದೇಶಿ ಮತ್ತು ದೇಶೀಯ ಮದ್ಯವನ್ನು ಮಾರಾಟ ಮಾಡುವ ಅಂಗಡಿಗಳು ಸೇರಿವೆ. ಈ ನಿರ್ಬಂಧವು ಕೆಲವು ಮಾಲ್‌ಗಳಲ್ಲಿರುವ ಮದ್ಯದಂಗಡಿಗಳಿಗೂ ಅನ್ವಯಿಸುತ್ತದೆ. ಆದರೆ ಪರವಾನಗಿ ಪಡೆದ ರೆಸ್ಟೋರೆಂಟ್‌ಗಳು, ಬಾರ್‌ಗಳು ಮತ್ತು ಕ್ಲಬ್‌ಗಳಿಗೆ ಮದ್ಯ ಪೂರೈಸಲು ಅನುಮತಿ ಮುಂದುವರಿಯಲಿದೆ ಎಂದು ವರದಿಯಾಗಿದೆ. ಇದರರ್ಥ ಮದ್ಯದ ಚಿಲ್ಲರೆ ಅಂಗಡಿಗಳು ಮುಚ್ಚಲ್ಪಟ್ಟಿರುತ್ತವೆ. ಆದರೆ ಎಲ್ಲೆಡೆ ಮದ್ಯ ಮಾರಾಟ ಮತ್ತು ಸೇವೆಯ ಮೇಲೆ ಯಾವುದೇ ಏಕರೂಪದ ನಿರ್ಬಂಧಗಳಿಲ್ಲ.
ದೆಹಲಿ ಮೆಟ್ರೋ ಮುಚ್ಚಲಾಗಿದೆಯೇ?
ಪ್ರತಿಭಟನೆಗೂ ಮುನ್ನ 57 ದೆಹಲಿ ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗುವುದು ಎಂದು ಘೋಷಿಸಲಾಗಿತ್ತು. ಆದರೆ ಈ ನಡುವೆ ಸುಪ್ರೀಂ ಕೋರ್ಟ್‌ನ ಹಸ್ತಕ್ಷೇಪದ ನಂತರ ಡಿಎಂಆರ್‌ಸಿ ಪರಿಣಾಮ ಬೀರುವ ನಿಲ್ದಾಣಗಳ ಸಂಖ್ಯೆಯನ್ನು 45 ಕ್ಕೆ ಇಳಿಸಿತು. ಈ ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನ ಅಕ್ಟೋಬರ್ 9 ರಂದು ರಾತ್ರಿ 9 ಗಂಟೆಗೆ ಕ್ಲೋಸ್ ಮಾಡಲಾಗಿತ್ತು ಅದು ಅ. 10 ರಂದು ಸಂಜೆ 6 ಗಂಟೆಯವರೆಗೆ ಮುಂದುವರಿಯಲಿದೆ. ಪರಿಣಾಮ ಬೀರುವ ನಿಲ್ದಾಣಗಳಲ್ಲಿ ಇಂಟರ್ಚೇಂಜ್ ಸೇವೆ ಇರಲಿದೆ. ಆದರೆ ನವದೆಹಲಿ ಮೆಟ್ರೋ ನಿಲ್ದಾಣದ ಕ್ಲೋಸ್ ಬಂದ್, ಇದರರ್ಥ ಇಡೀ ದೆಹಲಿ ಮೆಟ್ರೋ ಪೂರಾ ಬಂದ್ ಮಾಡಿದೆ ಎಂದಲ್ಲ. ಎಲ್ಲೆಲ್ಲಿ ಸಂಚಾರ ದಟ್ಟಣ ಹೆಚ್ಚುವ ಸಾಧ್ಯತೆ ಇದೆಯೋ ಅಲ್ಲೆಲ್ಲ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಂದ್ ಮಾಡಲಾಗಿದೆ.
ಸದ್ಯ ರೈಲು ನಿಲ್ದಾಣದ ಪರಿಸ್ಥಿತಿ ಹೇಗಿದೆ?
ಭದ್ರತೆ ಮತ್ತು ಸಂಚಾರ ನಿರ್ಬಂಧದಿಂದಾಗಿ ರೈಲ್ವೆ ಸೇವೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ನವದೆಹಲಿ ಮತ್ತು ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣಗಳಲ್ಲಿ ಬೆಳಿಗ್ಗೆ 4 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಸಮಯದಲ್ಲಿ, ಈ ನಿಲ್ದಾಣಗಳಿಗೆ ಆಗಮಿಸುವ ಕೆಲವು ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳನ್ನು ಅವುಗಳ ಮೂಲ ನಿಲ್ದಾಣಗಳಲ್ಲಿ ರದ್ದುಗೊಳಿಸಲಾಗಿದೆ.
ಪ್ರತಿಭಟನೆ ಪರಿಣಾಮವಾಗಿ ದೆಹಲಿಯಲ್ಲಿನ ಕೆಲವು ಶಾಲೆ, ಕಾಲೇಜುಗಳು ಸಹ ಮುಚ್ಚಲಾಗಿದೆ. ಕೆಲವು ವೇಳಾಪಟ್ಟಿ ಬದಲಾಯಿಸಿವೆ. ಉದಾಹರಣೆಗೆ ಸರ್ದಾರ್ ಪಟೇಲ್ ವಿದ್ಯಾಲಯವು 6 ರಿಂದ 12 ನೇ ತರಗತಿಯವರೆಗಿನ ತರಗತಿಗಳನ್ನು ಆನ್‌ಲೈನ್‌ನಲ್ಲಿ ನಡೆಸಲಾಗುವುದು ಎಂದು ಘೋಷಿಸಿದೆ. ರಘುಬೀರ್ ಸಿಂಗ್ ಜೂನಿಯರ್ ಮಾಡರ್ನ್ ಶಾಲೆಯು ಶನಿವಾರ ನಿಗದಿಯಾಗಿದ್ದ ತನ್ನ ಪೇಟಿಎಂ (ಪೋಷಕ ಶಿಕ್ಷಣ) ಅನ್ನು ಮುಂದೂಡಿದೆ.
ಇನ್ನು ಕೆಲವು ಕಾಲೇಜುಗಳು ಅಕ್ಟೋಬರ್ 10 ರಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಿವೆ. ಆದರೆ ದೆಹಲಿಯ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳು ಮುಚ್ಚಿಲ್ಲ.
ಕನ್ನಾಟ್ ಪ್ಲೇಸ್‌ನಲ್ಲಿ ಅಂಗಡಿಗಳು ಕ್ಲೋಸ್?
ಭದ್ರತೆ ಮತ್ತು ಸಂಚಾರ ನಿರ್ಬಂಧದಿಂದಾಗಿ ದೆಹಲಿಯ ಕನ್ನಾಟ್ ಪ್ಲೇಸ್ ಮತ್ತು ಜಂತರ್ ಮಂತರ್ ಪ್ರದೇಶದ ಸುತ್ತಮುತ್ತಲಿನ ಅಂಗಡಿಗಳು, ಕಚೇರಿಗಳು ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ. ಇದು ಶಾಪಿಂಗ್ ಮತ್ತು ಇತರೆ ಕೆಲಸಕ್ಕಾಗಿ ಈ ಪ್ರದೇಶಕ್ಕೆ ಬರುವ ಜನರ ಸಂಖ್ಯೆಯ ಮೇಲೆ ಪರಿಣಾಮ ಬೀರಬಹುದು




