ಬೆಂಗಳೂರು: ಮತ್ತಿಕೆರೆಯಲ್ಲಿ 30 ಕೆಜಿ ಸಿಲಿಂಡರ್‌ನಲ್ಲಿ 27 ಕೆಜಿ ಗ್ಯಾಸ್ ಪೂರೈಕೆ
ಬೆಂಗಳೂರು: ಮತ್ತಿಕೆರೆಯಲ್ಲಿ (Mathikere) ಗ್ಯಾಸ್ (Gas) ಎಜೆನ್ಸಿಯೊಂದು 30 ಕೆಜಿ ಸಿಲಿಂಡರ್‌ನಲ್ಲಿ (Cylinder) 27 ಕೆಜಿ ಗ್ಯಾಸ್ ಸರಬರಾಜು ಮಾಡಿರುವುದು ಪತ್ತೆಯಾಗಿದೆ. ಮತ್ತಿಕೆರೆಯ ಚನ್ನಪ್ಪಗಾರ್ಡನ್‌ನಲ್ಲಿ 2 ಮ...

ಬೆಂಗಳೂರಿನ ಮತ್ತಿಕೆರೆಯ ಚನ್ನಪ್ಪಗಾರ್ಡನ್‌ನಲ್ಲಿ ಇಂಡಿಯನ್ ಗ್ಯಾಸ್‌ನ ಮೋಹನ್ ಏಜೆನ್ಸಿಯು ಗ್ರಾಹಕರಿಗೆ ಕಡಿಮೆ ತೂಕದ ಸಿಲಿಂಡರ್‌ಗಳನ್ನು ವಿತರಿಸಿದೆ. ಇಲ್ಲಿನ ಎರಡು ಮನೆಗಳಿಗೆ ಸರಬರಾಜು ಮಾಡಲಾದ 30 ಕೆಜಿ ಸಾಮರ್ಥ್ಯದ ಸಿಲಿಂಡರ್‌ಗಳನ್ನು ಪರಿಶೀಲಿಸಿದಾಗ ಕೇವಲ 27 ಕೆಜಿ ಗ್ಯಾಸ್ ಇರುವುದು ಬೆಳಕಿಗೆ ಬಂದಿದೆ. ಇದರಿಂದ ಆಕ್ರೋಶಗೊಂಡ ಸ್ಥಳೀಯ ನಿವಾಸಿಗಳು ಏಜೆನ್ಸಿಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಅವ್ಯವಹಾರ ನಡೆಸಿದ ಏಜೆನ್ಸಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿ ಗೋವಿಂದ ರಾಜು ಸರ್ಕಾರವನ್ನು ಒತ್ತಾಯಿಸಿದ್ದಾರೆ.




