ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಸುದ್ದಿ

ಬಳ್ಳಾರಿ ರಾಬಕೊವಿ ಹಾಲು ಒಕ್ಕೂಟದಲ್ಲಿ 47 ಲಕ್ಷ ರೂ. ಅಕ್ರಮ ವರ್ಗಾವಣೆ ಪತ್ತೆ

ಬಳ್ಳಾರಿ: ರಾಬಕೊವಿ ಹಾಲು ಒಕ್ಕೂಟದಲ್ಲಿ ಸತ್ತ ಜಾನುವಾರುಗಳ ವಿಮಾ ಹಣ ಲೂಟಿ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಆರೋಪಿ ತನ್ನ ಸಂಬಂಧಿಗಳ ಅಕೌಂಟ್‌ಳಿಗೆ ಲಕ್ಷ ಲಕ್ಷ ಹಣ ವರ್ಗಾವಣೆ ಮಾಡಿರುವ ವಿಚಾರ (Ballari)...

· ಬಳ್ಳಾರಿ
ರಾಬಕೊವಿ ಹಾಲು ಒಕ್ಕೂಟದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ – ಸಂಬಂಧಿಗಳ ಅಕೌಂಟ್‌ಳಿಗೆ ವರ್ಗಾವಣೆ ಮಾಡಿ ಹಣ ಲೂಟಿ
ಹಂಚಿಕೊಳ್ಳಿ:

ಬಳ್ಳಾರಿಯ ರಾಬಕೊವಿ ಹಾಲು ಒಕ್ಕೂಟದಲ್ಲಿ ಅಕೌಂಟೆಂಟ್ ಉಮಾಮಹೇಶ್ವರಿ ಅವರು ತಮ್ಮ ಸಂಬಂಧಿಗಳ ಖಾತೆಗಳಿಗೆ ಹಣ ವರ್ಗಾಯಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಒಕ್ಕೂಟದ ಮಾಜಿ ನಿರ್ದೇಶಕ ಧನಂಜಯ್ ಹಮಾಲ್ ಅವರು 16.5 ಕೋಟಿ ರೂ. ಅವ್ಯವಹಾರದ ಬಗ್ಗೆ ದೂರು ನೀಡಿದ್ದು, ಈ ಪೈಕಿ ಉಮಾಮಹೇಶ್ವರಿ ಅವರು ತಮ್ಮ ತಂದೆ ಬಸವರಾಜ್, ತಾಯಿ ಈರಮ್ಮ, ಪತಿ ಸಾಗರ್ ಬಾಬು ಮತ್ತು ಸಿಬ್ಬಂದಿ ಸಗಾಯಿ ಬಾಯಿಯವರ ಖಾತೆಗಳಿಗೆ 47 ಲಕ್ಷ ರೂ. ವರ್ಗಾಯಿಸಿರುವುದು ದಾಖಲೆಗಳಿಂದ ತಿಳಿದುಬಂದಿದೆ. ಈ ಅಕ್ರಮ ಕಳೆದ ಮೂರು ವರ್ಷಗಳಿಂದ ನಡೆದಿದೆ ಎಂದು ಆಡಳಿತ ಮಂಡಳಿ ಒಪ್ಪಿಕೊಂಡಿದೆ. ಆರೋಪಿಯನ್ನು ಅಮಾನತುಗೊಳಿಸಿ ಆಕೆಯ ವಶದಲ್ಲಿದ್ದ ಹಣವನ್ನು ವಸೂಲಿ ಮಾಡಲಾಗಿದೆ ಎಂದು ಮಂಡಳಿ ತಿಳಿಸಿದೆ.

ಹಂಚಿಕೊಳ್ಳಿ: