ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಸುದ್ದಿ

ಬೆಂಗಳೂರಿನ ಮಯೂರ್ ಬಡಾವಣೆಯಲ್ಲಿ ರೈತರ ಪ್ರತಿಭಟನೆಗೆ ಹೈಕೋರ್ಟ್ ತಡೆ

ಬೆಂಗಳೂರು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ (Pralhad Joshi) ಮನೆಗೆ ಮುತ್ತಿಗೆ ಹಾಕಲು ಪ್ಲ್ಯಾನ್‌ ಮಾಡಿದ್ದ ರೈತರಿಗೆ ಹೈಕೋರ್ಟ್‌ ಬಿಗ್ ಶಾಕ್ ನೀಡಿದೆ. ಮಯೂರ್ ಬಡಾವಣೆಯಲ್ಲಿ ರೈತರು ಪ್ರತಿಭಟನೆ ನಡೆಸಲು ಮುಂದಾಗಿದ...

· ಧಾರವಾಡ
ಪ್ರಹ್ಲಾದ್ ಜೋಶಿ ಮನೆಗೆ ಮುತ್ತಿಗೆ ಹಾಕಲು ಹೊರಟಿದ್ದ ರೈತರಿಗೆ ಬಿಗ್‌ ಶಾಕ್‌
ಹಂಚಿಕೊಳ್ಳಿ:

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ನಿವಾಸದ ಬಳಿ ಪ್ರತಿಭಟನೆ ನಡೆಸಲು ರೈತರು ಸಿದ್ಧತೆ ನಡೆಸಿದ್ದರು. ಆದರೆ ಸ್ಥಳೀಯ ನಿವಾಸಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿದ ನ್ಯಾಯಮೂರ್ತಿ ಕೆ.ಎಸ್. ಭರತ್ ಕುಮಾರ್ ಮತ್ತು ನ್ಯಾಯಮೂರ್ತಿ ಅನು ಶಿವರಾಮ್ ಅವರಿದ್ದ ವಿಭಾಗೀಯ ಪೀಠ, ವಸತಿ ಪ್ರದೇಶದಲ್ಲಿ ಇಂತಹ ಚಟುವಟಿಕೆಗಳಿಗೆ ಅವಕಾಶವಿಲ್ಲವೆಂದು ಸ್ಪಷ್ಟಪಡಿಸಿದೆ. ಕಬ್ಬಿನ ದರವನ್ನು ಟನ್‌ಗೆ 5,500 ರೂಪಾಯಿಗೆ ಹೆಚ್ಚಿಸಬೇಕು ಮತ್ತು ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ರೈತರು ಹೋರಾಟ ನಡೆಸುತ್ತಿದ್ದಾರೆ. ಸರ್ಕಾರಗಳು ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯವ್ಯಾಪಿ ಬಂದ್ ನಡೆಸುವುದಾಗಿ ರೈತ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಹಂಚಿಕೊಳ್ಳಿ: