ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಸುದ್ದಿ

ಬೀದರ್: ಕರ್ತವ್ಯ ಲೋಪದ ಹಿನ್ನೆಲೆ ಮದನೂರು ಗ್ರಾಪಂ ಪಿಡಿಒ ರಂಗಾಚಾರಿ ನಾರೋಜ ಅಮಾನತು

ಬೀದರ್: ಸರಿಯಾಗಿ ಕಚೇರಿಗೆ ಬಾರದ ಪಿಡಿಒ (PDO) ಅವರನ್ನು ಅಮಾನತು ಮಾಡಿದ ಜಿ.ಪಂ ಸಿಇಒ ಗಿತ್ತೆ ಮಾದವ್ ವಿಠಲರಾವ್ ಅವರು ಆದೇಶ ಹೊರಡಿಸಿದ್ದಾರೆ. ಬೀದರ್ (Bidar) ಜಿಲ್ಲೆಯ ಕಮಲನಗರ (Kamalanagar) ತಾಲೂಕಿನ ಮದನೂರು (Ma...

· ಬೀದರ್
ಸರಿಯಾಗಿ ಕಚೇರಿಗೆ ಬಾರದ್ದಕ್ಕೆ ಕ್ರಮ – ಪಿಡಿಒ ಅಮಾನತು ಮಾಡಿದ ಜಿ.ಪಂ ಸಿಇಒ
ಹಂಚಿಕೊಳ್ಳಿ:

ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಮದನೂರು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಯನ್ನು ಜಿಪಂ ಸಿಇಒ ಗಿತ್ತೆ ಮಾದವ್ ವಿಠಲರಾವ್ ಅಮಾನತುಗೊಳಿಸಿದ್ದಾರೆ. ಗ್ರಾಪಂ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿದ ಸಂದರ್ಭದಲ್ಲಿ ಪಿಡಿಒ ರಂಗಾಚಾರಿ ನಾರೋಜ ಅವರು ಗೈರು ಹಾಜರಾಗಿದ್ದರು. ಅಲ್ಲದೆ, ಇವರು ಸಮರ್ಪಕವಾಗಿ ಕಚೇರಿಗೆ ಬರುತ್ತಿಲ್ಲ ಎಂಬ ದೂರುಗಳು ಗ್ರಾಮಸ್ಥರಿಂದ ಕೇಳಿಬಂದಿದ್ದವು. ಸಾರ್ವಜನಿಕರಿಗೆ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇರೆಗೆ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಹಂಚಿಕೊಳ್ಳಿ: